

ಚಿತ್ರದುರ್ಗ: ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹೊಳಲ್ಕೆರೆ ರಸ್ತೆಯ ಯಾದವಾನಂದ ಮಠದ ಆವರಣದಲ್ಲಿನ ಶ್ರೀಹರಿ ಎಜುಕೇಶನಲ್ ಟ್ರಸ್ಟ್‌ನ ಚೈತನ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪಿ.ಎನ್.ಶ್ರೇಯಾ 587 ಅಂಕಗಳಿಸಿ ರಾಜ್ಯಕ್ಕೆ 8 ನೇ ರ‌್ಯಾಂಕ್, ಜಿಲ್ಲೆಗೆ ತೃತೀಯ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲಕ್ಷ್ಮಣ 579 ಅಂಕಗಳಿಸಿ ಕಾಲೇಜಿಗೆ ಪ್ರಥಮ, ಸಹನಾ 576 ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಶೆಟ್ಟಿ, ಕಾರ್ಯದರ್ಶಿ ಮಧು, ನಿರ್ದೇಶಕಿ ರಕ್ಷಾಮಧು, ಅಕಾಡಮಿಕ್ ಮುಖ್ಯಸ್ಥ ಶಹಬಾಜ್ ಅಹಮದ್, ಪ್ರಾಚಾರ್ಯ ಮಹೇಶ್ ಕುಮತಿಮಠ್, ಉಪ ಪ್ರಾಚಾರ್ಯ ಎನ್.ಎಸ್.ಅಜೇಯ್, ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಶ್ಲಾಘಿಸಿದ್ದಾರೆ.