ಚೇಳೂರಲ್ಲಿ ಸರಗಳ್ಳನ ಬಂಧನ

Published on

ಎಂ.ಎನ್​.ಕೋಟೆ: ಮನೆಯಲ್ಲಿಟ್ಟಿದ ಚಿನ್ನದ ಸರ ಕದ್ದಿದ್ದ ಕಳ್ಳನನ್ನು ಚೋಳರು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಹಾಗಲವಾಡಿ ಗ್ರಾಮದ ಎಚ್​.ಎಸ್​.ಸುದೀಶ್​(41) ಬಂಧಿತ. ಬಂಧಿತನಿಂದ 3.5 ಲಕ್ಷ ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ವಶಕ್ಕೆ ಪಡೆದಿದ್ದಾರೆ. ಹಾಗಲವಾಡಿ ಗ್ರಾಮದ ಸಿದ್ದರಾಮಕ್ಕ ಮನೆಯ ಹಾಲ್​ನಲ್ಲಿಟ್ಟಿದ್ದ ಮಾಂಗಲ್ಯ ಕಾಣೆಯಾಗಿತ್ತು. ಈ ಕುರಿತು ಚೇಳೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣಾ ದಾಖಲಾಗಿತ್ತು. ಪ್ರಕರಣಾ ತನಿಖೆಗೆ ರಚಿಸಿದ ವಿಶೇಷ ತಂಡ ಕಳ್ಳನನ್ನು ಪತ್ತೆ ಹಚ್ಚಿ ಬಂದಿಸಿದ್ದಾರೆ. ಗುಬ್ಬಿ ಠಾಣೆ ಸಿಪಿಐ ರಾಘವೇಂದ್ರ ಹಾಗೂ ಚೇಳೂರು ಪೋಲೀಸ್​ ಠಾಣೆಯ ಪಿಎಸ್​ ಐ.ನಾಗರಾಜು ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net