ಚೇಳುಗಳೊಂದಿಗೆ ಗ್ರಾಮಸ್ಥರ ಸರಸಾಟ

DSC_9897
Published on


ಯಾದಗಿರಿ: ಚೇಳುಗಳೆಂದರೆ ಹೆದರಿ ಮಾರುದ್ದ ದೂರ ಹೋಗುವ ಜನ, ಇಲ್ಲಿ ಈ ವಿಷ ಹುಳುವಿಗೆ ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ಅವುಗಳ ಜತೆಗೆ ಸರಸ, ಸಲ್ಲಾಪದಲ್ಲಿ ತೊಡಗುತ್ತಾರೆ. ಇವುಗಳ ಸರಮಾಲೆ ಮಾಡಿ ಕುಣಿದು, ಕುಪ್ಪಳಿಸುತ್ತಾರೆ!

ಅರೆ, ಇದೇನು ಅಚ್ಚರಿ ಎನ್ನಬೇಡಿ. ಯಾದಗಿರಿ ತಾಲೂಕಿನ ಕಂದಕೂರ ಗ್ರಾಮದಲ್ಲಿನ ಕೊಂಡಮ್ಮಾಯಿ ಬೆಟ್ಟದಲ್ಲಿ ಪ್ರತಿ ವರ್ಷದ ನಾಗರ ಪಂಚಮಿ ದಿನದಂದು ನಡೆಯುವ ಕೌತುಕ, ವಿಸ್ಮಯ. ಪಂಚಮಿ ದಿನದಂದು ಈ ಊರಲ್ಲಿ ಚೇಳುಗಳನ್ನು ಆರಾಸುತ್ತಾರೆ. ದೇಶದಲ್ಲಿ ಎಲ್ಲೂ ಕಾಣದ ಅಪರೂಪದ ಚೇಳಿನ ಪ್ರತಿಮೆ ಇಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಇಲ್ಲಿನ ಈ ಬೆಳವಣಿಗೆ ಹೈಟೆಕ್ ಯುಗದ ವಿಜ್ಞಾನಕ್ಕೂ ಸವಾಲಾಗಿ ಪರಿಣಮಿಸಿದೆ.

ಸೋಮವಾರ ಕೊಂಡಮ್ಮಾಯಿ ಬೆಟ್ಟ ಕೌತುಕದ ತಾಣವಾಗಿತ್ತು. ಪುಟಾಣಿ ಮಕ್ಕಳಿಂದ ಹಿಡಿದು ಮಹಿಳೆಯರು, ವೃದ್ಧರು ಚೇಳುಗಳ ಜತೆಗೆ ದಿನ ಕಳೆದರು. ಚೇಳುಗಳ ಸರಮಾಲೆ ಧರಿಸಿ ಆಟವಾಡಿದರು. ಇದೊಂದು ವಿಷಜಂತು ಎಂಬ ಭಯವೇ ಯಾರಲ್ಲೂ ಇರಲಿಲ್ಲ. ಸುದೀರ್ಘ ಅವ ಸರಸ, ಸಲ್ಲಾಪದಲ್ಲಿ ತೊಡಗಿದರೂ ಒಬ್ಬರಿಗೂ ಚೇಳು ಕಡಿಯಲಿಲ್ಲ.

ಜಿಲ್ಲಾ ಕೇಂದ್ರದಿಂದ 35 ಕಿಮೀ ದೂರದಲ್ಲಿ ಕಂದಕೂರ ಗ್ರಾಮವಿದೆ. ಪ್ರತಿ ವರ್ಷ ನಾಗರ ಪಂಚಮಿಯಂದು ನಾಗಪ್ಪನ ಬದಲು ಚೇಳುಗಳ ಆರಾಧನೆ ನಡೆಯುತ್ತದೆ. ಕೊಂಡಮ್ಮಾಯಿ ದೇವಿಯ ಮೂತರ್ಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ನಂತರ ಚೇಳು ಹಿಡಿದರೆ ಯಾವುದೇ ತೊಂದರೆ ಆಗುವುದಿಲ್ಲ ಎಂಬ ಅಚಲ ನಿಷ್ಠೆ, ನಂಬಿಕೆ ಇಲ್ಲಿನ ಜನರದ್ದಾಗಿದೆ. ಇದನ್ನು ಕಾಣಲು ಕನರ್ಾಟಕ ಸೇರಿ ನೆರೆಯ ತೆಲಂಗಾಣ ಮತ್ತು ಆಂಧ್ರ ರಾಜ್ಯದಿಂದಲೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ನಾಗರ ಪಂಚಮಿ ದಿನದಂದು ಮಾತ್ರ ಈ ಬೆಟ್ಟದಲ್ಲಿ ಚೇಳುಗಳ ರಾಶಿಯೇ ಸಿಗುತ್ತದೆ. ಆದರೆ ಮರು ದಿನ ಇಡೀ ಬೆಟ್ಟ ಹುಡುಕಿದರೂ ಒಂದೂ ಚೇಳು ಕಾಣ ಸಿಗದಿರುವುದು ವಿಸ್ಮಯಕಾರಿ ಸಂಗತಿ.

ಬೆಟ್ಟದಲ್ಲಿ ಮೊದಲು ಕೊಂಡಮ್ಮಾಯಿ ಮೂತರ್ಿ ಮಾತ್ರ ಇತ್ತು. ಜನರು ಬರಲು ಯಾವುದೇ ಸೌಲಭ್ಯ ಇರಲಿಲ್ಲ. ಆದರೆ ಹಿಂದಿನ ಶಾಸಕ ನಾಗನಗೌಡ ಕಂದಕೂರ, ಈ ಬೆಟ್ಟದ ಅಭಿವೃದ್ಧಿಗೆ 1 ಕೋಟಿ ರೂ.ವಿಶೇಷ ಅನುದಾನದಲ್ಲಿ ಮೆಟ್ಟಿಲು, ಭಕ್ತರಿಗೆ ಕುಳಿತುಕೊಳ್ಳಲು ಆಸನ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net