ಚೇಳು-ಹಾವು ಮರಿಗಳೊಂದಿಗೆ ಮಕ್ಕಳ, ಭಕ್ತರ ಆಟ

29klb ydg 07
Published on

ಯಾದಗಿರಿ: ನಾಗರ ಪಂಚಮಿ ದಿನವಾದ ಮಂಗಳವಾರ ಕಂದಕೂರ ಗ್ರಾಮಕ್ಕೆ ಹೊಂದಿಕೊAಡಿರುವ ಕೊಂಡಮ್ಮ ಬೆಟ್ಟದ ಕೊಂಡಮೇಶ್ವರಿ ದೇವಸ್ಥಾನದಲ್ಲಿ ಚೇಳು ಮತ್ತು ಹಾವಿನ ಮರಿಗಳ ಜತೆ ಮಕ್ಕಳು, ಭಕ್ತರು ಆಟವಾಡುವುದರ ಮೂಲಕ ಚೇಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮದಿAದ ಹಬ್ಬವನ್ನು ಆಚರಿಸಿದರು.

ಬೆಳಗ್ಗೆಯಿಂದಲೇ ಮನೆ ಅಂಗಳದಲ್ಲಿ ರಂಗೋಲಿ ಬಿಡಿಸಿ ಕಳಸದೊಂದಿಗೆ ಗ್ರಾಮಸ್ಥರು ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು, ಯುವಕ-ಯುವತಿಯರು ಕಲ್ಲಿನ ಸಂದಿ-ಗೊAದಿಗಳಲ್ಲಿ ಚೇಳು ಹುಡುಕಾಡಿದರು.ದೇವಸ್ಥಾನ ಸುತ್ತಲಿನ ಬೆಟ್ಟದ ಪ್ರದೇಶದಲ್ಲಿ ಶ್ರಾವಣ ಮಾಸದ ನಾಗರ ಪಂಚಮಿ ದಿನ ಎಥೇಚ್ಛವಾಗಿ ಚೇಳುಗಳು ಕಾಣಿಸುತ್ತವೆ. ಇವುಗಳನ್ನು ಹುಡುಕಲು ಮಕ್ಕಳಾದಿಯಾಗಿ ಎಲ್ಲರೂ ಚಿಕ್ಕ, ಮಧ್ಯಮ ಗಾತ್ರದ ಕಲ್ಲುಗಳನ್ನು ಸರಿಸಿ ನೋಡುತ್ತಿದ್ದರು.

ಸಾಮಾನ್ಯವಾಗಿ ಕೆಂಪು ಮಣ್ಣು ಮತ್ತು ಬೆಟ್ಟಗಳಲ್ಲಿ ಚೇಳುಗಳು ಕಾಣ ಸಿಗುತ್ತವೆ. ಒಂದೇ ದಿನ ಇಷ್ಟೊಂದು ಪ್ರಮಾಣದಲ್ಲಿ ದೇವಸ್ಥಾನದ ಸುತ್ತ ಸಿಗುವುದು ಅಚ್ಚರಿಯಾದರೆ, ವಿಷಜಂತು ಎಂಬ ಚೇಳು ಮತ್ತು ಹಾವಿನ ಮರಿ ಕಚ್ಚಿದರೂ ಇಲ್ಲಿ ವಿಷ ದೇಹದೊಳಗೆ ಹೊಕ್ಕಲ್ಲ. ಮಾನವಸ್ನೇಹಿಯಾಗಿ ಚೇಳು-ಹಾವುಗಳೊಂದಿಗೆ ಆಟವಾಡುವುದು ವಿಸ್ಮಯವೇ ಸರಿ. ಚೇಳನ್ನು ಕೆನ್ನೆ, ಅಂಗೈ, ನಾಲಿಗೆ ಹೀಗೆ ಬಾಲ ಹಿಡಿದು ಭಕ್ತರು ಆಟವಾಡಿದರೂ ಯಾರಿಗೂ ಕುಟುವುದಿಲ್ಲ. ಒಂದು ವೇಳೆ ಕುಟುಕಿದರೂ ವಿಷದ ಪ್ರಮಾಣ ಇರುವುದಿಲ್ಲ ಎಂಬುದು ಭಕ್ತರ ಅಂಬೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net