ಚೇರಂಬಾಣೆ ಕೊಟ್ಟೂರು ಶಾಲೆಗೆ ಹಲವು ಬಹುಮಾನ

25.npk-1
Published on

* ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟ

ನಾಪೋಕ್ಲು: ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಟ್ಟೂರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಲವು ಬಹುಮಾನ ಪಡೆದುಕೊಂಡು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

400 ಮೀಟರ್ ಓಟದಲ್ಲಿ ಪಿ. ಎನ್ ಜೀವ ನಾಣಯ್ಯ ಪ್ರಥಮ, 800 ಮೀ. ಓಟದಲ್ಲಿ ಆದರ್ಶ್ ದ್ವಿತೀಯ, 400 ಮೀ. ಓಟದಲ್ಲಿ ಯಶ್ವಿನ್ ದ್ವಿತೀಯ, 4/400 ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಭಾರದ ಗುಂಡು ಹಾಗೂ ತಟ್ಟೆ ಎಸೆತದಲ್ಲಿ ಪಿ. ಸಿ. ಶರಣ್ ಚಂಗಪ್ಪ ಪ್ರಥಮ, ಜಾವಲಿನ್ ಎಸೆತದಲ್ಲಿ ಆಶಿಕ್ ಮಂದಣ್ಣ ಪ್ರಥಮ,

ಭಾರದ ಗುಂಡು ಎಸೆತ ಬಾಲಕಿಯರ ವಿಭಾಗದಲ್ಲಿ ಚಸ್ಮಿತಾ ಪ್ರಥಮ, ತಟ್ಟೆ ಎಸೆತದಲ್ಲಿಶಿವಾನಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಬಾಲಕಿಯರ 200 ಮೀಟರ್ ಓಟದಲ್ಲಿ ವರುಣಿಕ ತೃತೀಯ, ಬಾಲಕರ ಫುಟ್‌ಬಾಲ್ ಹಾಗೂ ಕಬಡ್ಡಿ ತಂಡಗಳು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯ ಶಿಕ್ಷಕ ಕುದುಪಜೆ ಕವನ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸ್ವರೂಪ್, ದೈಹಿಕ ಶಿಕ್ಷಣ ಶಿಕ್ಷಕಿ ಸೀಮಾ ಕರವಂಡ, ತಂಡದ ವ್ಯವಸ್ಥಾಪಕ ಸಜನಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net