ಚೇತರಿಕೆ ಹಾದಿಯಲ್ಲಿ ಮುದ್ರಣ ಮಾಧ್ಯಮ

0507Klb06
Published on

ಕಲಬುರಗಿ: ವಿದ್ಯುನ್ಮಾನ ಮಾಧ್ಯಮದ ಪ್ರಭಾವ ಹಾಗೂ ಕೋವಿಡ್-೧೯ ಹರಡುವಿಕೆಯಿಂದ ತನ್ನ ವೈಭವ ಕಳೆದುಕೊಂಡಿರುವ ಮುದ್ರಣ ಮಾಧ್ಯಮ ಚೇತರಿಕೆಯ ಹಾದಿ ತುಳಿದಿದ್ದು, ಮುಂಬರುವ ದಶಕದಲ್ಲಿ ಹಿಂದಿನ ವೈಭವ ಮರಳಿ ಪಡೆಯಲಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರೂ ಆದ ವಿಜಯವಾಣಿ ಸ್ಥಾನಿಕ ಸಂಪಾಕ ಬಾಬುರಾವ ಯಡ್ರಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಶರಣಬಸವ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಇಂದು ವಿದ್ಯುನ್ಮಾನ ಮಾಧ್ಯಮವೂ ಕ್ಷೀಣಿಸುತ್ತ ಸಾಗಿದೆ. ಅಧಿಕೃತ ಮಾಹಿತಿ ಕೊರತೆ ಮತ್ತು ಸುದ್ದಿಗಳನ್ನು ಅತಿಯಾಗಿ ಬಿಂಬಿಸುತ್ತಿರುವುದೇ ಇದಕ್ಕೆ ಕಾರಣ. ಆದರೆ ಮುದ್ರಣ ಮಾಧ್ಯಮ ತನ್ನ ಹಿಡಿತ ಸಾಧಿಸುವತ್ತ ಹೆಜ್ಜೆ ಇರಿಸಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಬ್ರಿಟಿಷರ ದಬ್ಬಾಳಿಕೆ ಆಡಳಿತದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಬೆಂಬಲ ಕ್ರೋಡೀಕರಿಸಲು ಸ್ವಾತಂತ್ರö್ಯ ಹೋರಾಟಗಾರರು ಮುದ್ರಣ ಮಾಧ್ಯಮವನ್ನು ಪ್ರಬಲ ಸಾಧನವಾಗಿ ಬಳಸಿಕೊಂಡಿದ್ದರು. ಸ್ವಾತಂತ್ರö್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರö್ಯಕ್ಕೆ ಧಕ್ಕೆ ಬಂದಾಗಲೆಲ್ಲ ದುರದೃಷ್ಟವಶಾತ್ ವ್ಯಾಪಾರೀಕರಣದ ಬಲೆಗೆ ಬಿದ್ದಿದೆ. ಇದನ್ನು ಹಿಮ್ಮೆಟ್ಟಿಸಲು ಮಾಧ್ಯಮಗಳು ಹೆಚ್ಚು ಜವಾಬ್ದಾರರಾಗುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.
ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಮತ್ತು ಉದಯೋನ್ಮುಖ ಪತ್ರಕರ್ತರು ಆದರ್ಶ ಪತ್ರಕರ್ತರಾಗಲು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಆದರ್ಶ ಪತ್ರಕರ್ತರಾಗಲು ಮುಖ್ಯ ಮಾನದಂಡವೆAದರೆ ವೃತ್ತಿಯಲ್ಲಿ ಸಮಗ್ರತೆ ಕಾಪಾಡುವುದು ಮತ್ತು ಓದುಗರಿಗೆ ಯಾವುದೇ ಭಯ ಅಥವಾ ಕೃಪೆಯಿಲ್ಲದೆ ಮಾಹಿತಿ ನೀಡುವುದು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಶರಣಬಸವ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಜ್ಞಾನ ಹೆಚ್ಚಿಸುವ, ಅವರ ಬರವಣಿಗೆ ಕೌಶಲ ಮತ್ತು ಆಲೋಚನಾ ಸಾಮರ್ಥ್ಯ ಹೆಚ್ಚಿಸುವಂತಹ ಪ್ರಬಂಧ ಸ್ಪರ್ಧೆಯನ್ನು ನಿಯಮಿತ ಆಯೋಜಿಸುತ್ತಿದೆ ಎಂದು ಶ್ಲಾಘಿಸಿದರು.
ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಮಾತನಾಡಿ, ಇಂತಹ ಸ್ಪರ್ಧೆ ಆಯೋಜಿಸಿದ್ದಕ್ಕೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವನ್ನು ಶ್ಲಾಘಿಸಿ ಇಂಜಿನಿಯರಿAಗ್, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿ ಬಹುತೇಕ ಎಲ್ಲ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ವಿವಿ ಕುಲಸಚಿವ ಡಾ.ಎಸ್.ಜಿ. ಡೊಳ್ಳೆಗೌಡರ್ ಮಾತನಾಡಿದರು. ವಿವಿ ಡೀನ್ ಡಾ.ಲಕ್ಷಿö್ಮÃ ಪಾಟೀಲ್ ಮಾಕಾ, ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net