

ಕಲಬುರಗಿ: ಕರೋನಾ ಸೋಂಕಿತರ ಪ್ರಕರಣಗಿಂತ ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಚೇತರಿಕೆ ಪ್ರಮಾಣ ಸಾವಿರದ ಗಡಿ ದಾಟಿದೆ. ಇದು ಸಮಾಧಾನಕರ ಸಂಗತಿಯಾಗಿದೆ. ಸೋಮವಾರ 23 ಹೊಸ ಪ್ರಕರಣಗಳು ಪತ್ತೆಯಾಗಿವೆ. ಎರಡು ದಿನದಿಂದ ಸೋಂಕಿತ ಪ್ರಮಾಣದಲ್ಲಿ ಸ್ವಲ್ಪ ಇಳಿಮುಖ ಕಂಡಿದೆ. ಜಿಲ್ಲೆಯ ಸೋಮವಾರ 23 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1421ಕ್ಕೇರಿದೆ. 39 ಸೋಂಕಿತರು ಇಂದು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದರೊಂದಿಗೆ 1048 ಜನರು ಚೇತರಿಸಿಕೊಂಡಿದ್ದು, 355 ಸಕ್ರಿಯಪ್ರಕರಣಗಳಿವೆ. 4 ವರ್ಷದ ಬಾಲಕ ಹಾಗೂ 9 ವರ್ಷದ ಬಾಲಕಿ ಹಾಗೂ 1ಪುರುಷರು, 7 ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ. ಇಲ್ಲಿವರೆಗೆ ಜಿಲ್ಲೆಯಲ್ಲಿ 18 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಚೇತರಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನರಲ್ಲಿ ನೆಮ್ಮದಿ ತಂದಿದೆ.
ಇಂದಿನಿಂದ ಸಂಜೆ 4ವರೆಗೆ ಮಾತ್ರ ವ್ಯಾಪಾರ
ಶಹಾಬಾದ್: ನಗರದ ದಿನಸಿ, ತರಕಾರಿ, ಬಂಗಾರದ ಅಂಗಡಿ ಸೇರಿ ಎಲ್ಲ ವ್ಯಾಪಾರ- ವಹಿವಾಟುಗಳನ್ನು ಬೆಳಗ್ಗೆಯಿಂದ ಸಂಜೆ 4ರ ವರೆಗೆ ನಡೆಸಲು ಎಲ್ಲ ವಿಭಾಗದ ವರ್ತಕರು ನಿರ್ಧರಿಸಿದ್ದಾರೆ. ನಗರಸಭೆ ಸಭಾಂಗಣದಲ್ಲಿ ಸ್ವಯಂ ಪ್ರೇರಿತರಾಗಿ ಸಭೆ ನಡೆಸಿದ ದಿನಸಿ, ಬಟ್ಟೆ, ತರಕಾರಿ, ಬಂಗಾರದ ಅಂಗಡಿ ಮಾಲೀಕರು, ಪಟ್ಟಣದಲ್ಲಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಾಲೂಕ ಆಡಳಿತ, ನಗರಸಭೆ, ಪೊಲೀಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗೆ ಸಹಕಾರ ನೀಡುವ ಉದ್ದೇಶದಿಂದ ವ್ಯಾಪಾರ ವಹಿವಾಟನ್ನು ಬೆಳಗ್ಗೆ 7ರಿಂದ ಸಂಜೆ 4 ವರೆಗೆ ತೆರೆದಿಡಲಾಗುವುದು. ಪ್ರತಿ ಭಾನುವಾರ ಸಂಪೂರ್ಣ ಮಾರುಕಟ್ಟೆ ಮುಚ್ಚಲು ನಿರ್ಧರಿಸಲಾಗಿದೆ. ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ್, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ರಫೀಕ್ ಬಾಗಬಾನ್, ಅಫ್ಸರ್ ಸೇಠ್, ಶ್ರೀಶೈಲಪ್ಪ ಅವಂಟಿ, ಮಹ್ಮದ್ ಜಲೀಲ್, ರಾಜ್ ಮಹ್ಮದ್ ರಾಜಾ ಇತರರಿದ್ದರು. ಕಲಬುರಗಿ, ಕರೊನಾ, ಜಿಲ್ಲಾಧಿಕಾರಿ ಬಿ.ಶರತ್, kalaburagi, carona, DC B.Sharat,