ಚೇತನ ಕಾಲೇಜಿನಲ್ಲಿ 22ರಿಂದ ಚೇತನೋತ್ಸವ, ತಂತ್ರಜ್ಞಾನ ಫೆಸ್ಟ್, ಶಿಕ್ಷಕ ವಿಕಾಸ ಪುರಸ್ಕಾರ

chetan college
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ತಾಜನಗರದಲ್ಲಿರುವ ಚೇತನ ವಾಣಿಜ್ಯ, ಬಿಸಿಎ, ಬಿಬಿಎ ಹಾಗೂ ಎಂಬಿಎ ಕಾಲೇಜಿನಲ್ಲಿ ಡಿ. 22ರಿಂದ ಎರಡು ದಿನಗಳವರೆಗೆ ಚೇತನೋತ್ಸವ 2022 ಆಯೋಜಿಸಲಾಗಿದೆ ಎಂದು ಚೇತನ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ವಿಶ್ವನಾಥ ಕೊರವಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕಾಗಿ ಕಾಮರ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಫೆಸ್ಟ್, ವಸ್ತು ಪ್ರದರ್ಶನ ಆಯೋಜಿಸಲಾಗಿದೆ. 50ಕ್ಕೂ ಹೆಚ್ಚು ಪಿಯು ಮತ್ತು ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು ಎಂದರು.

ಡಿ. 23ರಂದು ನಿರ್ಮಲಾ ಫೌಂಡೇಷನ್ ಸಹಯೋಗದಲ್ಲಿ ಜೀವಮಾನ ಸಾಧನೆ ಗುರುತಿಸಿ ಶಿಕ್ಷಕ ವಿಕಾಸ್ ಪುರಸ್ಕಾರವನ್ನು ಐವರಿಗೆ ನೀಡಲಾಗುತ್ತಿದೆ. 25 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 5ಕ್ಕೆ ಚೇತನ ನಗೆ ಹಬ್ಬ ಏರ್ಪಡಿಸಲಾಗಿದ್ದು, ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಶಿ ಅವರು ಹಾಸ್ಯ ಸಂಜೆ ನಡೆಸಿಕೊಡುವರು. ಆರೋಗ್ಯ ಭಾರತ ಹೆಲ್ತ್ ಕಾರ್ಡ್ ಮಾಡಿಸಿಕೊಡುವ ಕಾರ್ಯಕ್ರಮವೂ ನಡೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪ್ರಾಚಾರ್ಯ ಡಾ. ಅಶೋಕ ವಡಕಣ್ಣವರ, ಡಾ. ರಮಾಕಾಂತ ಕುಲಕರ್ಣಿ, ಡಾ. ಪವನ ಅಪರಂಜಿ, ಡಾ. ಪ್ರಶಾಂತ ಗಾಮನಗಟ್ಟಿ, ಪ್ರೊ. ಶಿಲ್ಪಾ ಕುಲಕರ್ಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net