

ಬಳ್ಳಾರಿ : ಚೆಸ್‌ನಲ್ಲಿ ಸ್ಪರ್ಧೆ ಮಾಡುವುದರಿಂದ ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಬಿಪಿಎಸ್‌ಸಿ ಶಾಲೆ ಚೇರಮೆನ್ ಡಾ.ಎಸ್.ಜೆ.ವಿ. ಮಹಿಪಾಲ್ ಹೇಳಿದರು.
ನಗರದ ಬಿಪಿಎಸ್‌ಸಿ ಶಾಲೆಯ ಆವರಣದಲ್ಲಿ ಚೆಸ್ ಅಕಾಡೆಮಿ ವತಿಯಿಂದ ನಡೆದ ಮಕ್ಕಳ ಚೆಸ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಚೆಸ್ ಸ್ಪರ್ಧೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚುವ ಜತೆಗೆ ಭೌದ್ಧಿಕ ಶಕ್ತಿ ಕೂಡ ಹೆಚ್ಚುವುದು. ಅಲ್ಲದೆ, ಮಕ್ಕಳಲ್ಲಿ ಏಕಾಗ್ರತೆ ಹಾಗೂ ಶ್ರದ್ಧೆಯನ್ನು ತರುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂದರು.
ಸ್ಪರ್ಧೆಯಲ್ಲಿ ಜಿಲ್ಲೆ ಹಾಗೂ ವಿವಿಧಡೆಯಿಂದ ಒಟ್ಟು 28 ಶಾಲೆಗಳಿಂದ 170ಕ್ಕೂ ಅಧಿಕ ಮಕ್ಕಳು ಚೆಸ್‌ನಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.