ಚೆಸ್ ರಾಜ್ಯಮಟ್ಟಕ್ಕೆ ಪ್ರವೀಣ ರೆಡ್ಡಿ ಆಯ್ಕೆ

10 bk-3
Published on

ಬಸವಕಲ್ಯಾಣ: ಬೀದರ್ ಜಿಲ್ಲಾ ಮಟ್ಟದ ಚೆಸ್ ಕ್ರೀಡೆಯಲ್ಲಿ ತಾಲೂಕಿನ ರಾಜೇಶ್ವರದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿ ಪ್ರವೀಣ ರೆಡ್ಡಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ನಡೆಯಲಿರುವ ರಾಜ್ಯಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸಿಂಧು, ಜಿಲ್ಲಾ ಸಮನ್ವಯಾಧಿಕಾರಿ ಶರಣಪ್ಪ ಬಿರಾದಾರ, ಪ್ರಾಚಾರ್ಯ ಕಲ್ಲಪ್ಪ ಠಮಕೆ, ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಮಡಿವಾಳ, ಸಹ ಶಿಕ್ಷಕರಾದ ಜ್ಯೋತಿ, ಪದ್ಮಮ್ಮ, ಪಾರ್ವತಿ, ರಮೇಶ ಗಂಜಿ, ಸಚಿನ್ ಪರೀಟ್, ಅನೀಲಕುಮಾರ ಗಾಯಕವಾಡ, ಮಂಜುನಾಥ ಕಟ್ಟಿಮನಿ, ಚೈತನ್ಯ, ಇಂದುಮತಿ, ನಿಲಯ ಪಾಲಕ ಬೀರಪ್ಪ, ಶಿವರಾಜ ವಗ್ಗೆ, ಚೆಸ್ ವ್ಯವಸ್ಥಾಪಕ ಶಿವಾನಂದ ಮೇತ್ರೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net