ಚೆಲುವನ ಸನ್ನಿಧಿಯಲ್ಲಿ ಇ-ಹುಂಡಿ ಪ್ರಾರಂಭ :

25mlk1
Published on

ಮಂಡ್ಯ : ವಿಶ್ವವಿಖ್ಯಾತ ಮೇಲುಕೋಟೆಯ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಗುರುವಾರದಿಂದ ಇ-ಹುಂಡಿ ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರು ಕಾಣಿಕೆಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ಎಸ್‌ಬಿಐ ಹಾಗೂ ದೇವಾಲಯದ ಸಹಯೋಗದಲ್ಲಿ ಏಳು ಕಡೆ ಕ್ಯೂ ಆರ್ ಕೋಡ್ ಸ್ಕಾೃನರ್ ಅಳವಡಿಸಲಾಗಿದೆ.

ಚೆಲುವನಾರಾಯಣಸ್ವಾಮಿ ಪೂಜೆ ಸಲ್ಲಿಸಿ ಇ-ಹುಂಡಿ ಕಾಣಿಕೆ ಪ್ರಕ್ರಿಯೆ ಆರಂಭಿಸಿದ ಎಸ್.ಬಿ.ಐ. ಜಿಲ್ಲಾ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕಿ ಸಂಧ್ಯಾ, ಡಿಜಿಟಲ್ ಇಂಡಿಯಾದ ಅಂಗವಾಗಿ ದೇಶಾದ್ಯಂತ ಪ್ರಮುಖ ದೇವಾಲಯಗಳಲ್ಲಿ ಎಸ್‌ಬಿಐ ಇ-ಹುಂಡಿ ಖಾತೆಗಳನ್ನು ಆರಂಭಿಸಿದೆ. ಅಂತೆಯೇ, ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿಯೂ ಚಾಲನೆ ನೀಡಲಾಗಿದೆ. ಭಕ್ತರು ಕ್ಯೂ ಆರ್ ಕೋಡ್ ಸ್ಕಾೃನ್ ವಾಡಿ ನೇರವಾಗಿ ಖಾತೆಗೆ ಕಾಣಿಕೆ ಸಂದಾಯ ವಾಡಬಹುದು ಎಂದರು.

ಇನ್ನು ಮೇಲುಕೋಟೆ ಬೆಟ್ಟದ ಯೋಗಾನರಸಿಂಹಸ್ವಾಮಿ ದೇಗುಲದಲ್ಲೂ ಇ-ಹುಂಡಿ ಆರಂಭಿಸಲಾಗಿದೆ. ಅಂತೆಯೇ ನಿಮಿಷಾಂಬ, ಆರತಿ ಉಕ್ಕಡ ದೇವಾಲಯಗಳಲ್ಲಿಯೂ ಇದೆ. ಜಿಲ್ಲಾದ್ಯಂತ ಎಲ್ಲ ಪ್ರಮುಖ ದೇವಾಲಯಗಳಲ್ಲಿ ಈ ಹುಂಡಿ ಅಳವಡಿಸಲಾಗುವುದು ಎಂದರು.

ದೇವಾಲಯದ ಇಒ ಮಂಗಳಮ್ಮ, ರಾವಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್, ಎಸ್.ಬಿ.ಐ. ಮುಖ್ಯ ವ್ಯವಸ್ಥಾಪಕ ವಿರೂಪಾಕ್ಷ, ವ್ಯವಸ್ಥಾಪಕ ಕೌಶಲ್, ಮೇಲುಕೋಟೆ ಶಾಖೆಯ ವ್ಯವಸ್ಥಾಪಕ ಪ್ರಶಾಂತ್, ದೇವಾಲಯದ ಅಕೌಂಟೆಂಟ್ ಹೇಮಂತಕುವಾರ್, ಸ್ವಾಮಿ ಸನ್ನಿಧಿ ಅರ್ಚಕ ವರದರಾಜಭಟ್ಟರ್, ಸ್ಥಾನೀಕಂ ಸಂತಾನರಾಮನ್, ಕರಗಂರಾಮಪ್ರಿಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net