ಚೆಲುವ ನಾರಾಯಣಸ್ವಾಮಿಗೆ ವಸ್ತ್ರ ಸಮರ್ಪಣೆ

10mlk1
Published on

* ತ.ನಾಡು ಮುಜರಾಯಿ ಜಂಟಿ ನಿರ್ದೇಶಕ ದೊರೈ ಭಾಗಿ

ಮೇಲುಕೋಟೆ : ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆ ಸೌಹಾರ್ದ ವಿನಿಮಯಕ್ಕಾಗಿ ತಮಿಳುನಾಡು ಸರ್ಕಾರದ ಕಾಂಚೀಪುರಂ ಮುಜರಾಯಿ ವಿಭಾಗದ ಧಾರ್ಮಿಕದತ್ತಿ ಇಲಾಖೆಯ ಜಂಟಿ ನಿರ್ದೇಶಕ ಕುಮಾರ ದೊರೈ, ಅಧಿಕಾರಿ ಮತ್ತು ಅರ್ಚಕರ ತಂಡ ಶ್ರೀ ಚೆಲುವ ನಾರಾಯಣಸ್ವಾಮಿಗೆ ರಾಜಮುಡಿ ಉತ್ಸವದಂದು ವಿಶೇಷ ವಸ್ತ್ರ ಸಮರ್ಪಣೆ ಮಾಡಿದರು.

ನಂತರ ಮಾತನಾಡಿದ ಕುಮಾರ ದೊರೈ, ತಮಿಳುನಾಡಿನಲ್ಲಿ ಜನಿಸಿದ ಭಾರತದ ಮಹಾನ್‌ಸಂತ ರಾಮಾನುಜಾಚಾರ್ಯರ ಕರ್ಮಭೂಮಿ ಎಂದೇ ಮೇಲುಕೋಟೆ ಖ್ಯಾತವಾಗಿದೆ. ಹಾಗಾಗಿ ತಮಿಳುನಾಡಿನ ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಭಕ್ತರ ವಾಸ್ತವ್ಯಕ್ಕೆ ಭವನ ನಿರ್ಮಿಸಲು ಹಾಗೂ ರಾಜಮುಡಿ ಉತ್ಸವಕ್ಕೆ ಉತ್ತಮ ವ್ಯವಸ್ಥೆ ಮಾಡಲು ತ.ನಾಡು ಮುಜರಾಯಿ ಇಲಾಖೆ ಸಿದ್ಧವಿದೆ ಎಂದರು.

ನಮ್ಮ ಸರ್ಕಾರ ಎರಡೂ ರಾಜ್ಯಗಳ ಸೌಹಾರ್ದ ಸಂಬಂಧ ವೃದ್ಧಿ, ಪರಂಪರೆ ಮತ್ತು ಸಂಸ್ಕೃತಿ ವಿನಿಮಯಕ್ಕಾಗಿ ನೀಡಿರುವ ವಿಶೇಷ ಆದೇಶದಂತೆ ರಾಮಾನುಜರ ಗುರುಗಳಾಗಿದ್ದ ಮದುರಮಂಗಲಂ ಎಂಬಾರ್ ಮತ್ತು ಕೇಶವ ಪೆರುಮಾಳ್ ದೇವಾಲಯದಿಂದ ಶ್ರೀ ಚೆಲುವನಾರಾಯಣನಿಗೆ ವಿಶೇಷ ಗೌರವ ಸಮರ್ಪಣೆ ಮಾಡಲಾಗಿದೆ. ಈ ವರ್ಷ ರಾಜಮುಡಿ ಉತ್ಸವಕ್ಕೆ ಪುಷ್ಪಕೈಂಕರ್ಯ, ವಿಶೇಷವಾದ್ಯ, ವಸ್ತ್ರ ಸಮರ್ಪಣೆ ಮಾಡಿದ್ದು ಧನ್ಯತೆ ಮೂಡಿಸಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net