ಚೆರಗ ಚೆಲ್ಲಿದ ರೈತ ಕುಟುಂಬಗಳು

1641124827031
Published on

ವಿಜಯಪುರ: ಉತ್ತರ ಕರ್ನಾಟಕ ಭಾಗದಲ್ಲಿ ಆಚರಿಸಲಾಗುವ ರೈತರ ಸಂಭ್ರಮದ ಹಬ್ಬ ಎಳ್ಳು ಅಮವಾಸೆಯನ್ನು ವಿಜಯಪುರದಲ್ಲೂ ಅದ್ಧೂರಿಯಿಂದ ಆಚರಿಸಲಾಯಿತು. ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಮಹಾವೀರ ಚಂದ್ರನಾಥ ಒಂದಕುದುರಿ ಅವರ ಜಮೀನಿನಲ್ಲಿ ಚೆರಗ ಚಲ್ಲುವ ಮೂಲಕ ಸಂಭ್ರಮಿಸಲಾಯಿತು. ಮಹಾವೀರ ಅವರ ಕುಟುಂಬಸ್ಥರು, ಸಂಭಂದಿಕರು, ಸ್ನೇಹಿತರು ಆಗಮಿಸಿ ಚರಗ ಚೆಲ್ಲುವ ಹಬ್ಬದಲ್ಲಿ ಪಾಲ್ಗೊಂಡಿದ್ರು. ವರ್ಷಕ್ಕೊಮ್ಮೆ ಬರುವ ರೈತರ ದೊಡ್ಡ ಹಬ್ಬ ಇದಾಗಿದ್ದು, ರೈತಕುಟುಂಬಗಳು ಈ ಹಬ್ಬ ಆಚರಿಸಿ ಸಂಭ್ರಮಿಸುತ್ತವೆ. ಮಹಿಳೆಯರೆಲ್ಲ ಬೇಗನೆ ಎದ್ದು ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಸಜ್ಜಿ ಕಡುಬು, ತರಹೇವಾರಿ ತರಕಾರಿ ಹಾಗೂ ಕಾಳು ಸೇರಿಸಿ ಪಲ್ಯೆ ತಯಾರಿಸಲಾಗುತ್ತದೆ. ಬಳಿಕ ಜಮೀನಿಗೆ ಬಂದು ಹುಲ್ಲುಲ್ಲಗೋ ಸಲಂಬರಿಗೋ ಎಂದು ಜಮೀನು ತುಂಬೆಲ್ಲ ತಿರುಗಾಡಿ ಭೂ ತಾಯಿಗೆ ಅಡುಗೆಯನ್ನು ಅರ್ಪಿಸಿ, ಎಲ್ಲರೂ ಸೇರಿ ಒಂದೆಡೆ ಕುಳಿತು ಸವಿರುಚಿಯಾದ ಅಡುಗೆ ಸವಿಯುತ್ತಾರೆ. ಹಸಿರು ಹೊದ್ದು ನಿಂತ ಭೂತಾಯಿ ಸಂತೃಪ್ತಿಯಾಗಲಿ, ಅನ್ನದಾತನಾದ ರೈತನಿಗೆ ಒಳ್ಳೆಯ ಇಳುವರಿ ಕೊಡಲಿ ಎಂದು ರೈತರು, ಮಹಿಳೆಯರು ಕೇಳಿಕೊಳ್ತಾರೆ. ವಿಜಯಪುರದ ಹಳ್ಳಿ ಹಳ್ಳಿಯಲ್ಲೂ ಈ ಎಳ್ಳು ಅಮವಾಸೆಯನ್ನು ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net