ಚೆತನ್ಯದಿಂದಿರಲು ಶಿವಯೋಗ ಅವಶ್ಯ

3
Published on

ಇಟಗಿ: ಮನಸ್ಸು ಮತ್ತು ಭಾವನೆಗಳು ಸದಾ ಚೆತನ್ಯವಾಗಿರಲು ಶಿವಯೋಗ ಸಾಧನೆ ಅತಿ ಅವಶ್ಯಕ ಎಂದು ಕೆಎಲ್​ಇ ಸಂಸ್ಥೆ ಜೆಎನ್​ಎಂಸಿ ವೈದ್ಯಕಿಯ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಅವಿನಾಶ ಕವಿ ಹೇಳಿದರು.

ಸಮೀಪದ ಬೆಲೂರ ಗ್ರಾಮದ ನಿಷ್ಕಲ ಮಂಟಪದ ಚನ್ನಬಸವಣ್ಣನವರ ಸಭಾಭವನದಲ್ಲಿ ಶರಣ ಸಂಸತಿ ಶಿಬಿರದ ನಿಮಿತ್ತ ಭಾನುವಾರ ಶಿವಯೋಗದಲ್ಲಿ ವೆಜ್ಞಾನಿಕತೆ ಕುರಿತು ಉಪನ್ಯಾಸ ನೀಡಿದರು. ಸಾನ್ನಿಧ್ಯ ವಹಿಸಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ, ವ್ಯಕ್ತಿಯ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಉತ್ತಮವಾಗಿರಲು ಯೋಗ ಮತ್ತು ಧ್ಯಾನ ಅವಶ್ಯಕ. ವಚನ ಸಾಹಿತ್ಯ ಅರಿಯುವ ಮೂಲಕ ಸುಂದರ ಜೀವನ ನಡೆಸಿ ಎಂದು ಹೇಳಿದರು. ಈ ವೇಳೆ ಬಸವದೇವರು, ಮಹಾಂತೇಶ ತೋರಣಗಟ್ಟಿ, ರವಿಗೌಡ ಪಾಟೀಲ, ಅಶೋಕ ಬೆಣಚಿನಮರಡಿ, ಬಸವರಾಜ ಲದ್ದಿಮಠ, ಸಂಗಮೇಶ ಹಿರೇಮಠ, ನಾಗೇಶ ಬೆಣ್ಣಿ, ನಾಗೇಶ ಅಜ್ಜವಾಡಿಮಠ, ಶಂಕರ ಪತ್ತಾರ, ಶಿವಾನಂದ ಮೆಟ್ಯಾಲ, ಚನ್ನಪ್ಪ ಪಾಟೀಲ, ಶಿವರುದ್ರಗೌಡ ಪಾಟೀಲ ಹಾಗೂ ಶಿಬಿರಾರ್ಥಿಗಳು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net