ಚೆಕ್‌ಪೋಸ್ಟ್ನಲ್ಲಿ ಸಿಬ್ಬಂದಿಯೇ ಇಲ್ಲ

klb3
ಸಿಬ್ಬಂದಿಯಿಲ್ಲದೆ ಭಣಗುಡುತ್ತಿರುವ ಅಫಜಲಪುರ ತಾಲೂಕಿನ ಅರ್ಜುಣಗಿ ಚೆಕ್ ಪೋಸ್ಟ್.
Published on

ಅಫಜಲಪುರ: ನೆರೆಯ ಮಹಾರಾಷ್ಟçದಲ್ಲಿ ವಿಧಾನಸಭೆ ಚುನಾವಣೆ ಗರಿಗೆದರಿದ್ದು, ರಾಜ್ಯದಲ್ಲೂ ಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಗಡಿ ತಾಲೂಕುಗಳಲ್ಲಿ ಚೆಕ್‌ಪೋಸ್ಟ್ಗಳನ್ನು ನಿರ್ಮಿಸಿದ್ದು, ಹಲವು ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗುತ್ತಿದೆ.

ತಾಲೂಕಿನಲ್ಲಿ ಮಣ್ಣೂರು, ಬಳೂರಗಿ, ಮಾಶಾಳ, ಅರ್ಜುಣಗಿಯಲ್ಲಿ ಜಿಲ್ಲಾಧಿಕಾರಿಗಳು ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿ, ಅಕ್ರಮ ಮದ್ಯ, ವಸ್ತು ಹಾಗೂ ಹಣ ಸಾಗಣೆ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಆದರೆ ಅರ್ಜುಣಗಿ ಚೆಕ್ ಪೋಸ್ಟ್ನಲ್ಲಿ ಸರಿಯಾಗಿ ಗಸ್ತು ನಡೆಯುತ್ತಿಲ್ಲ. ಪೊಲೀಸ್ ಸಿಬ್ಬಂದಿಯೂ ಕಾಣಲ್ಲ. ವಾಹನ ಪರಿಶೀಲನೆ ಮಾಡುವವರು ಇಲ್ಲದಂತಾಗಿದೆ. ಹೆಸರಿಗೆ ಮಾತ್ರ ಚೆಕ್ ಪೋಸ್ಟ್ ನಿರ್ಮಿಸಿದಂತಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net