ಪೊನ್ನಂಪೇಟೆ: ಕರ್ನಾಟಕ ಪಬ್ಲಿಕ್ ಶಾಲಾ ಟರ್ಫ್ ಮೈದಾನದಲ್ಲಿ ಕೊಡವ ಹಾಕಿ ಅಕಾಡೆಮಿ ವತಿಯಿಂದ ಆಯೋಜಿಸಿರುವ ಪಾಂಡಂಡ ಎಂ. ಕುಟ್ಟಪ್ಪ ಜ್ಞಾಪಕಾರ್ಥದ ಕೊಡವ ಕೌಟುಂಬಿಕ ರಿಂಕ್ ಹಾಕಿ ನಮ್ಮೆಯ ಬುಧವಾರದ ಪಂದ್ಯಗಳಲ್ಲಿ ಚೆಕ್ಕೇರ ಹಾಗೂ ಚೇನಂಡ ಎರಡು ಬಾರಿ ಗೆಲುವಿನ ನಗೆ ಬೀರಿತು. ಚೆಕ್ಕೇರ ಶಿಯಾನ್, ಚೇನಂಡ ಮೌರ್ಯ ತಲಾ 7 ಗೋಲು ಸಿಡಿಸಿ ಸಂಭ್ರಮಿಸಿದರು.
ಎರಡು ಗೆಲುವು: ಚೆಕ್ಕೇರವು ಕಾಳೇಂಗಡ ಮತ್ತು ಮುಕ್ಕಾಟೀರ (ಕಡಗದಾಳ್) ತಂಡಗಳನ್ನು ಮಣಿಸಿತು. ಕಾಳೇಂಗಡವನ್ನು 6-5 ಗೋಲುಗಳ ಸೋಲಿಸಿತು. ಚೆಕ್ಕೇರ ಶಿಯಾನ್, ಆದರ್ಶ್, ಕಾಳೇಂಗಡ ಬೋಪಣ್ಣ ತಲಾ 3 ಗೋಲು, ಪವನ್ 2 ಗೋಲು ಬಾರಿಸಿದರು. ಮುಕ್ಕಾಟೀರ (ಕಡಗದಾಳ್) ತಂಡವನ್ನು 9-4 ಗೋಲುಗಳ ಅಂತರದಲ್ಲಿ ಮಣಿಸಿತು. ಚೆಕ್ಕೇರ ಶಿಯಾನ್ 4, ಆದರ್ಶ್, ಸಿದ್ದಾಂತ್ ತಲಾ 2, ಮಂದಪ್ಪ 1, ಮುಕ್ಕಾಟೀರ ನಾಣಯ್ಯ, ಅಶ್ವಿನ್ ತಲಾ 2 ಗೋಲು ಹೊಡೆದರು. ಚೇನಂಡಕ್ಕೆ ಐಚೆಟ್ಟಿರ ಮತ್ತು ಐನಂಡ ವಿರುದ್ಧ ಗೆಲುವು ದೊರೆಯಿತು. ಐಚೆಟ್ಟಿರ ವಿರುದ್ಧ ಟೈಬ್ರೇಕರ್‌ನಲ್ಲಿ 9-8 ಗೋಲುಗಳ ರೋಚಕ ಗೆಲುವು ಲಭಿಸಿತು. ಉಭಯ ತಂಡಗಳು 6-6 ಗೋಲುಗಳ ಸಮಬಲದ ನಂತರ, ಟೈಬ್ರೇಕರ್‌ನಲ್ಲಿ ಚೇನಂಡ ತಂಡದ ಗೋಲಿ ಚೇನಂಡ ಸಂಪನ್ ಗೋಲು ತಡೆದು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.
ಫಲಿತಾಂಶ: ಮುಕ್ಕಾಟೀರವು (ಕಡಗದಾಳ್) ಪುದಿಯೊಕ್ಕಡವನ್ನು 3-2 ಗೋಲುಗಳಿಂದ ಮಣಿಸಿತು. ಮುಕ್ಕಾಟೀರ ಕಾವ್ಯ 2, ನಾಣಯ್ಯ 1, ಪುದಿಯೊಕ್ಕಡ ಪ್ರಧಾನ್ 2 ಗೋಲು ಬಾರಿಸಿದರು. ಐನಂಡವು ಮುರುವಂಡ ವಿರುದ್ಧ 5-4 ಗೋಲುಗಳ ಜಯ ಸಾಧಿಸಿತು. ಐನಂಡ ಆರ್ಯ 2, ಬೋಪಣ್ಣ, ಆಕಾಶ್, ಮುರುವಂಡ ಅಪ್ಪಣ್ಣ ತಲಾ 2, ಕಾರ್ಯಪ್ಪ, ಪೊನ್ನಪ್ಪ ತಲಾ 1 ಗೋಲು ದಾಖಲಿಸಿದರು.
ಶಾಂತೆಯಂಡವು ಪುಟ್ಟಿಚಂಡವನ್ನು 2-0 ಗೋಲುಗಳಿಂದ ಸೋಲಿಸಿತು. ಶಾಂತೆಯಂಡ ತಿಮ್ಮಯ್ಯ, ಉತ್ತಪ್ಪ ಗೋಲು ಹೊಡೆದರು. ದೇಯಂಡಕ್ಕೆ ಉದಿಯಂಡ ವಿರುದ್ಧ 7-5 ಗೋಲುಗಳ ಜಯ ದೊರೆಯಿತು. ದೇಯಂಡ ಧೀರಜ್ 3, ವಿಶಿಕ್, ಸಂಜು, ಉದಿಯಂಡ ಧ್ಯಾನ್, ಪವನ್ ತಲಾ 2, ದೇವಯ್ಯ 1 ಗೋಲು ಬಾರಿಸಿದರು.
ಮಾಚಿಮಡವು ಮುಳ್ಳಂಗಡವನ್ನು 7-2 ಗೋಲುಗಳಿಂದ ಸೋಲಿಸಿತು. ಮಾಚಿಮಡ ಚರಣ್ 3, ಕಾರ್ಯಪ್ಪಮ ದೇಗುಲ್, ಮಂದಣ್ಣ ತಲಾ 1, ಮುಳ್ಳಂಗಡ ದರ್ಶನ್ 2 ಗೋಲು ಕಾಣಿಕೆ ನೀಡಿದರು.
ಕಾಡ್ಯಮಾಡಕ್ಕೆ ಬಾಳೆಯಡ ವಿರುದ್ಧ 6-4 ಗೋಲುಗಳ ಜಯ ದೊರೆಯಿತು. ಕಾಡ್ಯಮಾಡ ಚಿಣ್ಣಪ್ಪ 3, ಅಯ್ಯಪ್ಪ 2, ಪೊನ್ನಣ್ಣ 1, ಬಾಳೆಯಡ ವಿನಿಲ್ 2, ಸುತನ್, ಕಿರಣ್ ತಲಾ 1 ಗೋಲು ಹೊಡೆದರು.
2 ತಂಡ ಗೈರು: ಅಪ್ಪಾರಂಡ ಗೈರಾದ ಕಾರಣ ಮಾರ್ಚಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ಪೆಮ್ಮಣಮಾಡ ತಂಡವು ಗೈರಾದ ಹಿನ್ನೆಲೆಯಲ್ಲಿ ಮಣೋಟಿರ ಜಯ ಪಡೆದುಕೊಂಡಿತು.