ಚೆಕ್ ಪೋಸ್ಟ್‌ಗಳಲ್ಲಿ 43.78 ಲಕ್ಷ ರೂ. ವಶ

money
Published on

ಚಿತ್ರದುರ್ಗ: ಇಲ್ಲಿನ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಚೆಕ್ ಪೋಸ್ಟ್‌ಗಳಲ್ಲಿ ಗುರುವಾರ 43.78 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಮೊಳಕಾಲ್ಮುರಿನ ಕಣ್ಕುಪ್ಪೆ ಬಳಿ 2.90 ಲಕ್ಷ ರೂ., ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಕ್ರಾಸ್ ಬಳಿ 38 ಲಕ್ಷ ರೂ., ಕೆಇಬಿ ಬಳಿ 1.15 ಲಕ್ಷ ರೂ., ಚಿತ್ರದುರ್ಗದ ತುರುವನೂರು ರಸ್ತೆ ಬಳಿ ಬಳಿ 1.73 ಲಕ್ಷ ರೂ. ಸೇರಿ ಒಟ್ಟು 43.78 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ನೀತಿ ಸಂಹಿತೆ ಜಾರಿಯಾದ ದಿನದಿಂದ ದಾಖಲೆ ರಹಿತ, ಅಕ್ರಮ ಹಣ ಸಾಗಾಟ ನಿಯಂತ್ರಿಸಲು ಜಿಲ್ಲಾಡಳಿತ ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net