ಚೆಂಡು ಹೂ ಬೆಳೆಗಾರರಲ್ಲಿ ಮಂದಹಾಸ

19 KAMPLI 02
Published on

ಕಂಪ್ಲಿ: ದೀಪಾವಳಿ ಮೆರುಗು ಹೆಚ್ಚಿಸುವ ಚೆಂಡು ಹೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಚೆಂಡು ಹೂ ಉತ್ತಮ ಇಳುವರಿಯೊಂದಿಗೆ ದರವೂ ಹೆಚ್ಚಿದ್ದು ಬೆಳೆಗಾರರ ಮುಖದಲ್ಲಿ ಸಂತಸ ಮೂಡಿಸಿದೆ.

ತಾಲೂಕಿನಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಟೆನ್ನಿಸ್ ಬಾಲ್, ಆಫ್ರಿಕನ್ ಯೆಲ್ಲೋ, ಜೈನ್ ಡಬಲ್, ಬಸಂತಿ ಗೆಂಡ, ನಾರಂಗಿ ಗೆಂಡ ತಳಿಯ ಚೆಂಡು ಹೂ ಬೆಳೆಯಲಾಗಿದೆ. ಎಕರೆಗೆ 20ರಿಂದ 25 ಕ್ವಿಂಟಾಲ್ ಇಳುವರಿ ಬರುತ್ತಿದೆ. ಎಕರೆಗೆ ಸುಮಾರು 80 ಸಾವಿರ ರೂಪಾಯಿ ಖರ್ಚು ಮಾಡಿರುವ ರೈತರು ಲಾಭದ ನಿರೀಕ್ಷೆಯಲ್ಲಿದ್ದಾರೆ.

ಕೆಜಿಗೆ 40ರಿಂದ 60 ರೂಪಾಯಿಯಂತೆ ರೈತರು ಚೆಂಡು ಹೂ ಮಾರಾಟ ಮಾಡಿದ್ದು, ಮಾರುಕಟ್ಟೆಯಲ್ಲಿ ಕೆಜಿಗೆ 100 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ಚೆಂಡು ಹೂ ಬೆಳೆದ ರೈತರು ಎಕರೆಗೆ 50ಸಾವಿರದಿಂದ 70 ಸಾವಿರ ರೂಪಾಯಿವರೆಗೆ ಲಾಭದ ನಿರೀಕ್ಷೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net