ಚೂರಿಯಿಂದ ಇರಿದು ಯುವಕನ ಹತ್ಯೆ

Crime
Published on

ಚಿತ್ರದುರ್ಗ:ಚೂರಿಯಿಂದ ಇರಿದು ಯುವಕನ ಕೊಲೆಗೈದಿರುವ ಘಟನೆ ಹೊಸದುರ್ಗ ತಾಲೂಕು ನಾಗನಾಯಕನಹಳ್ಳಿಯಲ್ಲಿ ಗುರು ವಾರ ರಾತ್ರಿ ನಡೆದಿದೆ. ಗ್ರಾಮದಲ್ಲಿ ಊರ ಹಬ್ಬ ನಡೆಯುತ್ತಿದ್ದ ವೇಳೆ ಆದ ಗಲಾಟೆಯಲ್ಲಿ ಮನೋಜ್(21)ಎಂಬಾತನನ್ನು ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮನೋಜ್‌ನನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಹತ್ಯೆ ಆರೋಪಿ ಹಿರಿಯೂರು ತಾಲೂಕಿನವನೆಂದು ಹೇಳಲಾಗಿದ್ದು,ಈತ ಹಾಗೂ ಮನೋಜ್ ಮಧ್ಯೆ ಇದ್ದ ಹಳೆ ವೈಷಮ್ಯ ಕೊಲೆಗೆ ಕಾರಣವಾಗಿದೆ. ಶ್ರೀರಾಂಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸಿಪಿಐ ಮಧು ತನಿಖೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net