ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು

26ATH1
ಕೊಕಟನೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮುಖಂಡರು ಗ್ಯಾರಂಟಿ ಕಾರ್ಡ್ ವಿತರಿಸಿದರು. ಧರೆಪ್ಪ ಠಕ್ಕಣ್ಣವರ, ಸದಾಶಿವ ಬುಟಾಳಿ, ದೇವರಾಜ ದೇಸಾಯಿ, ಬಸವರಾಜ ಬುಟಾಳಿ ಇತರರು ಇದ್ದರು.
Published on

ಅಥಣಿ ಗ್ರಾಮೀಣ: ಕಾಂಗ್ರೆಸ್ ಎಲ್ಲರ ಹಿತ ಬಯಸುವ ಪಕ್ಷವಾಗಿದ್ದು, ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕಾಂಗ್ರೆಸ್ ಮುಖಂಡ ಧರೆಪ್ಪ ಠಕ್ಕಣ್ಣವರ ಹೇಳಿದರು. ಅಥಣಿ ತಾಲೂಕಿನ ಯಲ್ಲಮ್ಮವಾಡಿ, ಬಾಡಗಿ, ಸುಟ್ಟಟ್ಟಿ, ದಬದಬಹಟ್ಟಿ, ಝುಂಜರವಾಡ, ಬುರ್ಲಟ್ಟಿ, ಕಟಗೇರಿ, ಕೊಕಟನೂರ ಸೇರಿ ವಿವಿಧ ಗ್ರಾಮಗಳಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಗಹ ಜ್ಯೋತಿ ಹಾಗೂ ಗಹ ಲಕ್ಷ್ಮೀ ಗ್ಯಾರಂಟಿ ಕಾರ್ಡ್ ಮನೆ-ಮನೆಗೆ ವಿತರಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉಚಿತ ಅನ್ನ ಭಾಗ್ಯ ಕೊಟ್ಟಂತೆ ಈ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ನೀಡಿದರೆ ಗಹಲಕ್ಷ್ಮೀ, ಗಹಜ್ಯೋತಿ ಹಾಗೂ 10 ಕೆಜಿ ಅಕ್ಕಿ ಉಚಿತವಾಗಿ ವಿತರಿಸಲಾಗುವುದು. ಪಕ್ಷ ಈಗಾಗಲೇ ರಾಜ್ಯದ ಜನರಿಗೆ 3 ಗ್ಯಾರಂಟಿ ನೀಡಿದ್ದು, ಕಾಂಗ್ರೆಸ್ ಈವರೆಗೂ ನುಡಿದಂತೆ ನಡೆದಿದೆ. ಮಾರ್ಚ್ 3ರಂದು ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಮಾಜಿ ಸಿ.ಎಂ. ಸಿದ್ದರಾಮಯ್ಯ ಹಾಗೂ ಪಕ್ಷದ ಮುಖಂಡರು ಅಥಣಿಗೆ ಆಗಮಿಸಲಿದ್ದಾರೆ. ಕಾರ್ಯಕರ್ತರೆಲ್ಲ ಸಕ್ರಿಯವಾಗಿ ಪಾಲ್ಗೊಂಡು ಯಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು. ಕಾಂಗ್ರೆಸ್ ಹಿರಿಯ ಮುಖಂಡ ಸದಾಶಿವ ಬುಟಾಳಿ ಮಾತನಾಡಿದರು. ದೇವರಾಜ ದೇಸಾಯಿ, ಜಿಪಂ ಮಾಜಿ ಸದಸ್ಯ ಬಸವರಾಜ ಬುಟಾಳಿ, ಬಂಡು ಜಾಧವ, ಸಚಿನ ಬುಟಾಳಿ, ಬಸಪ್ಪ ಗುಮಟಿ, ಸುನಿಲ ಸಂಕ, ಶಿವಪ್ಪ ನೇಮಗೌಡ, ಮಾಯಪ್ಪ ಅಜ್ಜಣಗಿ, ಕಲಾವತಿ ಕಿತ್ತೂರ, ಶಿವಲಿಂಗ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net