ಚುನಾವಣೆಗೂ ಮಂಜುನಾಥನ ಬಳಕೆ ಸರಿಯೇ

Aanjaneya
Published on

ಚಿತ್ರದುರ್ಗ: ಜನಪ್ರತಿನಿಧಿಗಳಲ್ಲಿ ಕೆಲವರು ಚುನಾವಣೆ ವೇಳೆ ಕವರ್‌ನೊಳಗೆ ದುಡ್ಡಿನ ಜೊತೆ ಮಂಜುನಾಥ ಸ್ವಾಮಿಯ ಭಾವಚಿತ್ರ ಇಟ್ಟು ಮಾತು ತಪ್ಪಿದರೆ, ಶಿಕ್ಷೆ ಎಂದು ಬರೆದು ದೇವರ ಹೆಸರನ್ನೂ ದುರ್ಬಳಕೆ ಮಾಡಿಕೊಳ್ಳುವ ಸ್ಥಿತಿಗೆ ರಾಜಕಾರಣ ತಲುಪಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಬೇಸರಿದರು.

ಹೊಳಲ್ಕೆರೆ ತಾಲೂಕಿನಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯ ನೂತನ ಕಟ್ಟಡ ವಿಕಾಸ ಸೌಧ ಉದ್ಘಾಟನೆಯಲ್ಲಿ ಮಾತನಾಡಿ, ಸತ್ಯ, ಧರ್ಮದ ನಂಬಿಕೆ ಕಾರಣಕ್ಕೆ ಮಂಜುನಾಥ ಸ್ವಾಮಿಯ ಸನ್ನಿಧಿ ಮುಂದೆ ಆಣೆ, ಪ್ರಮಾಣ ಮಾಡುವುದಾಗಿ ರಾಜಕಾರಣಿಗಳು ಹೇಳುವುದು ಸಾಮಾನ್ಯ. ಆದರೆ, ಚುನಾವಣೆಯಲ್ಲಿ ಭಾವಚಿತ್ರವಿಟ್ಟು ಹೆದರಿಸುವುದು ಧರ್ಮ ಮಾರ್ಗವೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net