ಚುನಾವಣೆ ಕರ್ತವ್ಯ ನಿರ್ಲಕ್ಷ್ಯ ಮೂವರ ಅಮಾನತು

DC Venkatesh
Published on

ಚಿತ್ರದುರ್ಗ: ಚುನಾವಣೆ ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ ಮೂವರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಗುರುವಾರ ಆದೇಶಿಸಿದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಸಹ ಶಿಕ್ಷಕಿಯರಾದ ಚಿಕ್ಕಪುರ ಗೊಲ್ಲರಹಟ್ಟಿ ಕೆ.ಬಿ.ಜಯಮ್ಮ, ತೋಪುರಮಾಳಿಗೆ ಎಸ್.ರೂಪಾ, ದೈಹಿಕ ಶಿಕ್ಷಕಿ ಮಠದ ಕುರುಬರಹಟ್ಟಿ ಕೆ.ಗಿರಿಜಮ್ಮ ಅಮಾನತುಗೊಂಡವರು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಮೂನೆ 6, 7ರ ಪರಿಶೀಲನೆ, 85 ವರ್ಷ ಮೇಲ್ಪಟ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲ ಮತದಾರರಿಗೆ ಅಂಚೆ ಮತಪತ್ರದ ಮೂಲಕ ಮತದಾನ ಕಾರ್ಯ, ಎಪಿಕ್ ಕಾರ್ಡ್ ವಿತರಿಸುವ ಕೆಲಸ ಅತ್ಯಂತ ತುರ್ತಾಗಿ ನಿರ್ವಹಿಸಬೇಕಾಗಿದೆ. ಆದರೆ, ಬಿಎಲ್‌ಒಗಳಾಗಿ ನೇಮಿಸಿದ್ದ ಈ ಮೂವರು ಕರ್ತವ್ಯಕ್ಕೆ ಹಾಜರಾಗದೆ, ಲೋಪ ಎಸಗಿದ ಕಾರಣ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಚುನಾವಣಾ ಕಾರ್ಯ ಗಂಭೀರವಾಗಿ ಪರಿಗಣಿಸದೆ, ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ, ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net