

ಪಾಂಡವಪುರ : ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಗ್ರಾಪಂ ಉಪಚುನಾವಣೆಗಳಲ್ಲಿ ಸದಸ್ಯರಾಗಿ ಆಯ್ಕೆಯಾದವರಿಗೆ ರೈತಸಂಘ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ತಾಲೂಕಿನ ನಾರಾಯಣಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ವಳಗೆರೆದೇವರಹಳ್ಳಿಯಿಂದ ಆಯ್ಕೆಯಾದ ವಿಜಯ ಹಾಗೂ ಹೊಸಹಳ್ಳಿ ಗ್ರಾಮದಿಂದ ಆಯ್ಕೆಯಾದ ಕಾವ್ಯಾಅವರನ್ನು ಪಟ್ಟಣದ ಶಾಸಕ ಕಚೇರಿಯಲ್ಲಿ ಮಂಗಳವಾರ ಗೌರವಿಸಿಲಾಯಿತು.
ಈ ಸಂದರ್ಭ ಮಾತನಾಡಿದ ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕಾರ್ಯವೈಖರಿಯನ್ನು ಮೆಚ್ಚಿ ಉಪಚುನಾವಣೆಯಲ್ಲಿ ಜನ ರೈತಸಂಘ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಆಯ್ಕೆಯಾಗಿರುವ ಅಭ್ಯರ್ಥಿಗಳು ತಮ್ಮ ಬ್ಲಾಕಿನ ಮತದಾರರ ಆಶಯದಂತೆ ಉತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದರು. ರೈತಸಂಘ ಮುಖಂಡರಾದ ರಾಘವ ಪ್ರಕಾಶ್, ಚಿಕ್ಕಾಡೆ ವಿಜೇಂದ್ರ, ಹಿರೇಮರಳಿ ಶಿವಕುಮಾರ, ಹಿರೋಡೆ ಬೀದಿ ಶಶಿ, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ, ಯುವರಾಜ ಇತರರು ಇದ್ದರು.