ಚುಟುಕು ಭೂಷಣ ಗೌರವ ಪ್ರಶಸ್ತಿಗೆ ಆಯ್ಕೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ನೀಡುವ 2024ರ ಚುಟುಕು ಭೂಷಣ ಗೌರವ ಪ್ರಶಸ್ತಿಗೆ ಚುಟುಕು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 6 ಜನರನ್ನು ಆಯ್ಕೆ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಶಂಕರಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಭಾರತೀ ಸ್ವಾಮಿ, ಗದಗ ಜಿಲ್ಲೆಯ ಮುಂಡರಗಿ ಅನ್ನದಾನೇಶ್ವರ ಮಠದ ಶ್ರೀ ಡಾ.ಅನ್ನದಾನೀಶ್ವರ ಮಹಾಶಿವಯೋಗಿ, ಬಸವಕಲ್ಯಾಣದ ರಂಭಾಪುರಿ ಶಾಖಾಮಠದ ಡಾ.ಅಭಿನವ ರುದ್ರಮುನಿ ಸ್ವಾಮಿ, ಕಲಬುರ್ಗಿ ಜಿಲ್ಲೆಯ ನಾಲ್ವಾರ ಕೋರಿಸಿದ್ದೇಶ್ವರ ಸಂಸ್ಥಾನಮಠದ ಡಾ. ಸಿದ್ದತೋಟೇಂದ್ರ ಶಿವಾಚಾರ್ಯರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ನಿವೃತ್ತ ಅಧ್ಯಾಪಕ ಪೊ›. ಜಿ.ಯು.ನಾಯಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಶಾಲಾ ಶಿಕ್ಷಕಿ ಶಾಂತಾ ಪುತ್ತೂರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್​ನಲ್ಲಿ ಆಯೋಜಿಸಲಾಗುವುದು. ಪೊ›.ಡಿ.ಡಿ.ಮುತಾಲಿಕ ದೇಸಾಯಿ, ವೀರನಗೌಡ ಮರಿಗೌಡ್ರ, ಮಂಜುಳಾ ನಾಮದೇವ, ಎನ್.ವಿ. ರಮೇಶ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ಆಯ್ಕೆ ನಡೆಸಿದೆ ಎಂದು ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net