

ಮುಂಡರಗಿ: ಭಾರತ ಗಡಿಯಲ್ಲಿ ಅನವಶ್ಯಕವಾಗಿ ತಂಟೆ ತೆಗೆಯುತ್ತಿರುವ ಚೀನಾ ಸೈನಿಕರ ವರ್ತನೆ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನಡೆ ವಿರೋಧಿಸಿ ಕನ್ನಡ ಕ್ರಾಂತಿ ಸೇನೆ ಕಾರ್ಯಕರ್ತರು ಪಟ್ಟಣದ ಕೊಪ್ಪಳ ಸರ್ಕಲ್ನಲ್ಲಿ ಬುಧವಾರ ಚೀನಾ ಅಧ್ಯಕ್ಷರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ ಮಾತನಾಡಿ, ಚೀನಾ ಸೇನೆ ಲಡಾಖ್ ಗಡಿ ಪ್ರದೇಶದಲ್ಲಿ ಕಾಲು ಕೆದರಿ ಭಾರತದ ಯೋಧರ ಮೇಲೆ ಪೈಶಾಚಿಕ ಕೃತ್ಯ ನಡೆಸಿರುವುದು ಖಂಡನೀಯ. ಅವರ ವರ್ತನೆಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ನಾವೆಲ್ಲ ಚೀನಾ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.
ಕನ್ನಡ ಕ್ರಾಂತಿ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಮುಧೋಳ, ಕನ್ನಡ ಕ್ರಾಂತಿ ಸೇನೆ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಡೊಣ್ಣಿ, ವೀರೇಶ ಹಡಗಲಿ, ವಿ.ಎಸ್. ಘಟ್ಟಿ, ನಾಗಭೂಷಣ ಹಿರೇಮಠ, ಶಿವು ನಾಡಗೌಡ್ರ, ವಿಶ್ವನಾಥ ಹುಬ್ಬಳ್ಳಿ, ಪವನ ಲೇಂಡ್ವೆ, ಮನೋಜ ಗುಂಡಿಕೇರಿ, ಮೈಬುಸಾಬ್ ಬೆಳಗಟ್ಟಿ, ಜಲಾಲ ಕೊಪ್ಪಳ, ಮಹಾಂತೇಶ ಕೊರಡಕೇರಿ, ಮಲ್ಲಿಕಾರ್ಜುನ ದೊಡ್ಡಮನಿ, ಶಿವು ಗುಗ್ಗರಿ, ಮಾರುತಿ ಯಾವಗಲ್ಲ, ಮಲ್ಲಪ್ಪ ಆರೇರ, ಅರುಣ ಡೊಣ್ಣಿ, ಅಕ್ಷಯ ಜೋಶಿ, ಶ್ರೀನಾಥ ಹಂದ್ರಾಳ, ವಿಠ್ಠಲ ಆರೇರ, ಈರಣ್ಣ ಬಂಡಿ, ನಾಗರಾಜ ರಾಮೇನಹಳ್ಳಿ, ನಾಸೀರ್ ದಂಡಿನ, ಮಂಜುನಾಥ ಗುರಿಕಾರ ಇತರರು ಇದ್ದರು.
ಹುತಾತ್ಮ ಯೋಧರಿಗೆ ಸಾಮೂಹಿಕ ಶ್ರದ್ಧಾಂಜಲಿ
ನರಗುಂದ: ಭಾರತ ಮತ್ತು ಚೀನಾ ಗಡಿ ಸಂಘರ್ಷದಲ್ಲಿ ಹುತಾತ್ಮರಾಗಿರುವ ಭಾರತೀಯ ವೀರಯೋಧರಿಗೆ ಪಟ್ಟಣದ ದಂಡಾಪೂರ ಬಡಾವಣೆಯ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರು ಬುಧವಾರ ಸಾಮೂಹಿಕವಾಗಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಿಜೆಪಿ ಯುವ ಘಟಕದ ತಾಲೂಕಾಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಲಡಾಖ್ನ ಕೇಂದ್ರಾಡಳಿತ ಪ್ರದೇಶ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ನಡೆದ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ. ಚೀನಾದ ಗಡಿ ಕ್ಯಾತೆ ಇಂದು ನಿನ್ನೆಯದ್ದಲ್ಲ. ಚೀನಾದವರ ಕುತಂತ್ರಕ್ಕೆ ಭಾರತೀಯ ಯೋಧರು ಬುದ್ಧಿ ಕಲಿಸದೇ ಸುಮ್ಮನೆ ಬಿಡಲಾರರು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಅಜ್ಜಪ್ಪ ಹುಡೇದ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ರಿಯಾಜ್ ಕೊಣ್ಣೂರು, ಪವಾಡೆಪ್ಪ ವಡ್ಡಿಗೇರಿ, ಕಿರಣ ಮುಧೋಳೆ, ವಿ.ಎಂ. ಪಾಟೀಲ, ಅಜ್ಜುಗೌಡ ಪಾಟೀಲ, ಮಂಜುನಾಥ ಮೆಣಸಗಿ, ನಾಗರಾಜ ನೆಗಳೂರ, ಸುರೇಶ ಸವದತ್ತಿ, ಈರಣ್ಣ ಹೊಂಗಲ್, ಶಿವು ಅಂಗಡಿ, ಸಿದ್ದೇಶ ಹೂಗಾರ, ವಿಠ್ಠಲ ಹವಾಲ್ದಾರ, ಮಂಜು ಗುಗ್ಗರಿ, ರಮೇಶ ಕಾಳೆ, ಇತರರಿದ್ದರು.
EndFragment