ಚೀನಾ ವಸ್ತು ಸುಟ್ಟು ಆಕ್ರೋಶ

H19 Lawyers Protest
Published on

ಹುಬ್ಬಳ್ಳಿ: ಭಾರತೀಯ ಸೈನಿಕರ ಹತ್ಯೆ ಖಂಡಿಸಿ ರಾಷ್ಟ್ರ ರಕ್ಷಣಾ ವೇದಿಕೆ ಸದಸ್ಯರು ಇಲ್ಲಿನ ತಿಮ್ಮಸಾಗರದ ನ್ಯಾಯಾಲಯಗಳ ಸಂಕೀರ್ಣದ ಎದುರು ಶುಕ್ರವಾರ ಚೀನಾ ವಸ್ತುಗಳನ್ನು ಸುಟ್ಟು ಪ್ರತಿಭಟನೆ ನಡೆಸಿದರು.

ಇಂದಿನಿಂದ ಚೀನಾ ಉತ್ಪನ್ನಗಳನ್ನು ಯಾರೂ ಖರೀದಿಸಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಚೀನಾ ಅಧ್ಯಕ್ಷರ ಪ್ರತಿಕೃತಿ ದಹಿಸಿದರು. ಚೀನಾದ ಬಾವುಟ ಹಾಗೂ ವಸ್ತುಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಸಂಚಾಲಕ ಅಶೋಕ ಅಣವೇಕರ, ಜಿಲ್ಲಾ ಸಂಚಾಲಕ ಶ್ರೇಣಿಕಕುಮಾರ್, ವಕೀಲರಾದ ಗೌರಿಶಂಕರ ಮೋಟ, ಗುರು ಹಿರೇಮಠ, ಆರ್.ಜಿ. ಮಟ್ಟಿ, ಶಿವಾನಂದ ವಡ್ಡಟ್ಟಿ, ಗುರು ಕಲಗೇರಿ, ಟಿ.ಜಿ. ಬಾಲಣ್ಣವರ, ಲಕ್ಷ್ಮಣ ಮೊರಬ, ನಿಂಗಪ್ಪ ಮುತ್ತಣ್ಣವರ, ಎಸ್.ವಿ. ರಾಯ್ಕರ, ತನುಶ್ರೀ ವಡ್ಡಟ್ಟಿ, ರೇಖಾ ಮುತ್ತಗಿ, ಪುಷ್ಪಾ ಪಾಟೀಲ, ಪ್ರಿಯಾ ಕಂಬಾಳಿಮಠ, ಪ್ರಭಾ ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net