ಚೀನಾ ವಸ್ತು ಬಹಿಷ್ಕರಿಸಲು ಜನಜಾಗೃತಿ

H24 Bhagat Singh Samiti 1
Published on

ಹುಬ್ಬಳ್ಳಿ: ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಭಗತ್ ಸಿಂಗ್ ಸೇವಾ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಜನಜಾಗೃತಿ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಇಲ್ಲಿನ ವಿದ್ಯಾನಗರದ ಶ್ರೀ ಕಾಡಸಿದ್ಧೇಶ್ವರ ಕಾಲೇಜು ವೃತ್ತದಿಂದ ಆರಂಭವಾದ ಪಾದಯಾತ್ರೆ ಕಿಮ್್ಸ ಮುಖ್ಯದ್ವಾರದವರೆಗೆ ಸಾಗಿತು. ‘ಬೈಕಾಟ್ ಮೇಡ್ ಇನ್ ಚೀನಾ’ ಎಂಬ ಭಿತ್ತಿಪತ್ರ ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಸೇವಾ ಸಮಿತಿಯ ಅಧ್ಯಕ್ಷ ಶಶಿಶೇಖರ ಡಂಗನವರ ನೇತೃತ್ವ ವಹಿಸಿದ್ದರು. ಪಾಲಿಕೆ ಮಾಜಿ ಸದಸ್ಯ ಲಕ್ಷ್ಮಣ ಉಪ್ಪಾರ, ಕಿರಣ ಉಪ್ಪಾರ, ಅನಿಲ ಶೆಟ್ಟಿ, ಭೀಮಾಶಂಕರ ಹಿರೇಮಠ, ಅಜಿತ ಅಂಗಡಿ, ಹರೀಶ, ಸಮರ್ಥ, ಶ್ರೀಪಾದ ಹುಯಿಲಗೋಳ, ಶ್ರೀನಿವಾಸ ನಾಯ್ಡು , ಅನೂಪ, ಬಸವರಾಜ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net