ಚೀನಾ ಉಪಟಳ ತಡೆಯಲು ಭೂತಾನ್‌ನಿಂದ ಅಡಕೆ ಆಮದು; ದೇಶಿ ಮಾರುಕಟ್ಟೆ ಮೇಲೆ ಪರಿಣಾಮ ಬೀರಲ್ಲ: ಆರಗ ಜ್ಞಾನೇಂದ್ರ

WEBBBB
Published on

ತೀರ್ಥಹಳ್ಳಿ: ಭೂತಾನ್ ದೇಶದಿಂದ ಹಸಿ ಅಡಕೆ ಆಮದು ಮಾಡಿಕೊಳ್ಳುವುದರಿಂದ ದೇಶಿ ಅಡಕೆ ಮಾರುಕಟ್ಟೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದು. ಈ ಬಗ್ಗೆ ಬೆಳೆಗಾರರು ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಅಡಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಕುಶಾವತಿಯಲ್ಲಿ ಆಧುನಿಕ ಯಂತ್ರಗಳ ಮಾರಾಟ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಫ್ರೀ ಟ್ರೇಡ್ ಒಪ್ಪಂದ ಹೊಂದಿರುವ ದೇಶಗಳೊಂದಿಗೆ ಕೊಡುಕೊಳ್ಳುವ ವ್ಯವಹಾರ ಅನಿವಾರ್ಯವಾಗಿದೆ. ಭೂತಾನ್‌ನಿಂದ ಕೇವಲ 17 ಸಾವಿರ ಟನ್ ಹಸಿ ಅಡಕೆ ಮಾತ್ರ ಅಮದಾಗುತ್ತಿದೆ. ಭಾರತದಿಂದ ಒಣಗಿದ ಅಡಕೆ ಮತ್ತು ಅಡಕೆ ಉತ್ಪನ್ನಗಳು ಎರಡು ಪಟ್ಟು ಆ ದೇಶಕ್ಕೆ ರಫ್ತು ಆಗುತ್ತಿದೆ. ಬಹಳ ಮುಖ್ಯವಾಗಿ ಚೈನಾದೇಶದ ಉಪಟಳ ತಡೆಗೆ ಭೂತಾನ್ ದೇಶದೊಂದಿಗೆ ಸ್ನೇಹ ಭಾರತಕ್ಕೆ ಅನಿವಾರ್ಯವಾಗಿದೆ. ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳು ಸಹಜ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net