

ಬೇಲೂರು: ತಾಲೂಕಿನ ನೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ಅರೇಹಳ್ಳಿ ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಚೀಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ 42 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಸಮಗ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಆದರ್ಶ 3,000 ಮೀ. ಓಟ ಪ್ರಥಮ, ಜಯಣ್ಣ ದ್ವಿತೀಯ, ಭರತ್ 1,500 ಮೀ. ಓಟ ಹಾಗೂ ಜಾವಲಿನ್ ಎಸೆತ ಪ್ರಥಮ, ಪವನ್ ಕುಮಾರ್ ದ್ವಿತೀಯ, ಕಿಶೋರ್ 200 ಮೀ. ಓಟ (ದ್ವಿ), ತಾರೇಶ್ ಹ್ಯಾಮರ್ ಥ್ರೋ (ದ್ವಿ). ಬಾಲಕಿಯರ ವಿಭಾಗದಲ್ಲಿ ನಿತ್ಯಾ 100 ಮೀ., 200 ಮೀ. ಓಟ, ಉದ್ದ ಜಿಗಿತದಲ್ಲಿ (ಪ್ರ)ಅಶ್ವಿತಾ 3,000 ಮೀ., 1500 ಮೀ., ಮತ್ತು 800 ಮೀ. ಓಟದಲ್ಲಿ ಪ್ರಥಮ ಸ್ಥಾನ. ಶಿಫಾ 1,500 ಮೀ ಓಟ (ದ್ವಿ), ಪರಮೇಶ್ವರಿ 3,000 ಮೀ. ಓಟ (ದ್ವಿ) ಅಪೇಕ್ಷಾ ತ್ರಿವಿಧ ಜಿಗಿತ (ಪ್ರ), ಬಾಲಕಿಯರ ವಿಭಾಗದ ಖೋ-ಖೋ ತಂಡ (ದ್ವಿ). ಸಮಗ್ರ ಪ್ರಶಸ್ತಿ ಪಡೆದ ತಂಡಕ್ಕೆ ಮುಖ್ಯ ಶಿಕ್ಷಕಿ ಗೀತಾ, ಎಸ್‌ಡಿಎಂಸಿ ಗೌರವ ಅಧ್ಯಕ್ಷ ಪ್ರಸನ್ನಗೌಡ, ಅಧ್ಯಕ್ಷ ಉಮೇಶ್, ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಸ್.ಧೂಳಬಾ ಅಭಿನಂದಿಸಿದರು.