ಚಿಹ್ನೆಗಳ ಹಂಚಿಕೆ

CTD 0008
Published on

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 20 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಮಾನ್ಯತೆ ಪಡೆದ ಪಕ್ಷಗಳ ಅಭ್ಯರ್ಥಿಗಳನ್ನು ಹೊರತು ಪಡಿಸಿ, ಉಳಿದ ನೋಂದಾಯಿತ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಚಿಹ್ನೆಗಳನ್ನು ಹಂಚಿಕೆ ಮಾಡಿದ್ದಾರೆ.
ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ-ಆನೆ, ಬಿಜೆಪಿಯ ಗೋವಿಂದ ಮಕ್ತಪ್ಪ ಕಾರಜೋಳ-ಕಮಲ, ಕಾಂಗ್ರೆಸ್ಸಿನ ಬಿ.ಎನ್.ಚಂದ್ರಪ್ಪ ಹಸ್ತದ ಚಿಹ್ನೆ ಹೊಂದಿದ್ದಾರೆ.
ನೋಂದಾಯಿತ ಪಕ್ಷಗಳ ಅಭ್ಯರ್ಥಿಗಳಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಿ.ಎನ್.ನರಸಿಂಹರಾಜು-ಬ್ಯಾಟರಿ ಟಾರ್ಚ್, ಉತ್ತಮ ಪ್ರಜಾಕೀಯ ಪಾರ್ಟಿಯ ಟಿ.ರಮೇಶ್‌ನಾಯ್ಕ-ಆಟೋರಿಕ್ಷಾ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ-ವ್ಹಿಸಲ್, ಕರುನಾಡ ಸೇವಕರ ಪಕ್ಷದ ಆರ್.ಶಬರೀಶ್-ತೆಂಗಿನ ತೋಟ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಡಿ.ಸುಜಾತಾ ಪ್ರೆಷರ್ ಕುಕ್ಕರ್ ಚಿಹ್ನೆ ಪಡೆದಿದ್ದಾರೆ.
ಪಕ್ಷೇತರರಾದ ಅಮೃತರಾಜ-ಗಣಕಯಂತ್ರ, ಗಣೇಶ್-ಮೈಕ್, ಎಚ್.ತುಳಸಿ-ಬಳೆಗಳು, ಎಂ.ಪಿ.ದಾರಕೇಶ್ವರಯ್ಯ-ಸ್ಟೆತೊಸ್ಕೋಪ್, ಕೆ.ನರಸಿಂಹಮೂರ್ತಿ-ಕಲ್ಲಂಗಡಿ, ನಾಗರಾಜಪ್ಪ-ಟ್ರಕ್, ವಿ.ಎಸ್.ಭೂತರಾಜ-ಸಿಸಿಟಿವಿ ಕ್ಯಾಮರಾ, ಟಿ.ಮಂಜುನಾಥಸ್ವಾಮಿ-ಹಡಗು, ಎಸ್.ರಘುಕುಮಾರ್-ದೂರವಾಣಿ, ಬಿ.ವೆಂಕಟೇಶ್ ಶಿಲ್ಪಿ-ಹಲಸಿನ ಹಣ್ಣು, ಎಸ್.ಎಚ್.ಶ್ರೀನಿವಾಸ-ಐಸ್‌ಕ್ರೀಂ, ಆರ್.ಸುಧಾಕರ ಅವರಿಗೆ ಹಣ್ಣುಗಳ ಇರುವ ಬ್ಯಾಸ್ಕೆಟ್ ಚಿಹ್ನೆ ಚುನಾವಣಾಧಿಕಾರಿ ಟಿ.ವೆಂಕಟೇಶ್ ಹಂಚಿಕೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net