ಚಿಲ್ಡ್‌ರನ್ ಚೆಸ್ ಟೂರ್‌ನಮೆಂಟ್ ಆ.11ರಂದು

Published on

ಬಳ್ಳಾರಿ : ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯಲ್ಲಿ ಬಳ್ಳಾರಿ ಚೆಸ್ ಅಕಾಡೆಮಿಯಿಂದ ಆ. 11(ಭಾನುವಾರ)ರಂದು ಚಿಲ್ಡರನ್ ಚೆಸ್ ಟೂರ್‌ನಮೆಂಟ್ ಆಯೋಜಿಸಲಾಗಿದೆ. ಇದರಲ್ಲಿ 16, 12 ವರ್ಷದೊಳಗಿನ ವಿಭಾಗ ಹಾಗೂ ಉಪವಿಭಾಗಗಳಾಗಿ 8, 10 ಹಾಗೂ 14 ವರ್ಷದೊಳಗಿನ ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿಯೊಂದು ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುವುದು. ಪ್ರವೇಶ ಶುಲ್ಕ 250 ರೂ. ನಿಗದಿ ಮಾಡಲಾಗಿದೆ. ಆಯೋಜಕರಾದ ರಫೀಕ್ 8123408000, 9945123114 ಹಾಗೂ ಶಿವನಂದ 8105304949 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net