ಚಿರತೆಗೆ ಮುಂದುವರಿದ ಶೋಧ

24 yelandur 01
ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದ ಜಮಿನುಗಳಲ್ಲಿ ಕ್ಯಾಮೆರಾ ಅಳವಡಿಸುತ್ತಿರುವುದು.
Published on

ಯಳಂದೂರು: ತಾಲೂಕಿನ ಮಲ್ಲಿಗೆಹಳ್ಳಿ, ಕೆಸ್ತೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದ ಜಮೀನು ಹಾಗೂ ಕೆರೆ ಪ್ರದೇಶಗಳಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಶೋಧಕಾರ್ಯ ಎರಡನೇ ದಿನವೂ ಮುಂದುವರಿದಿದೆ.


ಮೈಸೂರಿನಿಂದ ಚಿರತೆ ಕಾರ್ಯಪಡೆಯ 40 ಹಾಗೂ ಅರಣ್ಯ ಇಲಾಖೆಯ 20 ಸಿಬ್ಬಂದಿ ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಶೀಘ್ರ ಚಿರತೆ ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗುವುದು. ಚಿರತೆಯ ಚಲನವಲನ ಗಮನಿಸಲು 40 ಕ್ಯಾಮರಾ ಹಾಗೂ 6 ಬೋನುಗಳ ಇರಿಸಲಾಗಿದೆ ಎಂದು ಯಳಂದೂರು ಆರ್‌ಎಫ್‌ಒ ಲೊಕೇಶ್‌ಮೂರ್ತಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net