ಚಿರತೆ ಹೋಲುವ ಪ್ರಾಣಿಯ ದೇಹ ಪತ್ತೆ

IMG-20221119-WA0104 (1)
Published on

ಸುಂಟಿಕೊಪ್ಪ: ಕೆದಕಲ್ ಬಳಿ ಚಿರತೆ ಮರಿಯನ್ನು ಹೋಲುವ ಪ್ರಾಣಿಯ ಮೃತ ದೇಹ ಪತ್ತೆಯಾಗಿದೆ.
ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿ ಕಚೇರಿ ಬಳಿಯ ಪಕ್ಕದ ರಸ್ತೆ ಬದಿಯಲ್ಲಿ ಚಿರತೆಯನ್ನು ಹೋಲುವ ಮರಿ ಪ್ರಾಣಿಯ ಮೃತ ದೇಹ ಪತ್ತೆಯಾಗಿದೆ. ಮುಖದ ಭಾಗ ಗಾಯಗೊಂಡು ರಕ್ತಸ್ರಾವವಾಗಿದೆ. ಇದು ಚಿರತೆ ಮರಿಯೇ? ಅಥವಾ ಬೇರೆ ಪ್ರಾಣಿಯೇ ಎಂಬ ಬಗ್ಗೆ ನಿಖರ ಗುರುತು ಸಿಕಿಲ್ಲ. ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಕೆದಕಲ್ ನಿವಾಸಿ ಮಣಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net