ಚಿರತೆ ಹಿಡಿಯಲು ಕ್ಯಾಮರಾ ಕಣ್ಗಾವಲು

04
Published on

ಬೆಳಗಾವಿ: ನಗರದ ಗಾಲ್ಫ್​ ಮೈದಾನದಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಭಾನುವಾರವೂ ಚಿರತೆ ಬೋನಿಗೆ ಬೀಳಲಿಲ್ಲ. ಹೀಗಾಗಿ ಚಿರತೆ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ.

ಶುಕ್ರವಾರ ಕಾಣಿಸಿ ಕೊಂಡಿದ್ದ ಚಿರತೆ ಬಗ್ಗೆ ಮೂರು ದಿನಗಳಿಂದಲೂ ಕ್ಷಣಕ್ಷಣಕ್ಕೂ ಚಿರತೆ ಅಲ್ಲಿದೆ, ಇಲ್ಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಜನರಲ್ಲಿ ಗೊಂದಲ ಮೂಡಿಸುತ್ತಿದ್ದು, ಚಿರತೆಯ ಚಲನವಲನ ಗುರುತಿಸಲು ಭಾನುವಾರ ಮತ್ತಷ್ಟು ಜಾಗಗಳಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಯಿತು.

ಚಿರತೆ ಸೆರೆಹಿಡಿಯುವುದಕ್ಕಾಗಿ ಗಾಲ್ಫ್​ ಮೈದಾನದ ವಿವಿಧ ಭಾಗಗಳಲ್ಲಿ ನಾಯಿಗಳ ಸಮೇತ ಒಟ್ಟು 6 ಬೋನು ಇಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net