

ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಮದ್ಲೇಹಳ್ಳಿಯಲ್ಲಿ ಮಾರ್ಚ್ 3ರಂದು ಬೋನಿಗೆ ಬಿದ್ದಿದ್ದ ಚಿರತೆ ಅರಣ್ಯ ಇಲಾಖೆ ರ್ನಿಲಕ್ಷ$್ಯದಿಂದ ಬೆಂಕಿಗೆ ಆಹುತಿಯಾಗಿ ಮೃತಪಟ್ಟ ಟನೆಯನ್ನು ಇಲಾಖಾ ತನಿಖೆ ನಡೆಸದೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪರಿಸರವಾದಿಗಳು ಮಂಗಳವಾರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಚಿರತೆ ಸಾವಿನ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಇಲಾಖಾ ತನಿಖೆಗೆ ಆದೇಶಿಸಿದ್ದರಿಂದ ಅಧಿಕಾರಿಗಳು ರಜೆ ಮೇಲೆ ತೆರಳಬೇಕಿತ್ತು. ಆದರೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಹಾಗಾಗಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಪರಿಸರವಾದಿ ಮನೋಹರ್, ಪ್ರಾಚಿನ ಕಾಲದಿಂದಲೂ ವನ್ಯಜಿವಿ ಮತ್ತು ಮಾನವ ಸಂರ್ಷ ನಡೆಯುತ್ತಲೇ ಬಂದಿದೆ. ಚಿರತೆ ಹಾವಳಿ ಕುರಿತ ದೂರುಗಳು ಬಂದಾಗ ಎಸ್ಒಪಿ ನಿಯಮಾನುಸಾರ ಚಿರತೆ ಸೆರೆಗೆ ಬೋನ್ ಇಟ್ಟ ನಂತರದ ಬೆಳವಣಿಗೆಗಳನ್ನು ಹಂತ ಹಂತವಾಗಿ ಪರಿಶೀಲಿಸುವುದು ಅರಣ್ಯ ಇಲಾಖೆಯ ಜವಾಬ್ದಾರಿ. ವಿಶ್ವ ವನ್ಯಜಿವಿ ಸಪ್ತಾಹದ ದಿನದಂದೇ ಬೋನಿಗೆ ಬಿದ್ದಿದ್ದ ಚಿರತೆ, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದೆ. ಬೇಸಿಗೆ ಕಾಲದಲ್ಲಿ ಹೊಲ, ಹುಲ್ಲಿನ ಮೆದೆಗಳು ಮತ್ತು ಅರಣ್ಯ ಪ್ರದೇಶದಲ್ಲಿ ಬೆಂಕಿ ಅಥವಾ ಕಾಡ್ಗಿಚ್ಚು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಎಚ್ಚರದಿಂದಿರಬೇಕೆಂದು ಗ್ರಾಮಸ್ಥರಿಗೆ ತಿಳಿವಳಿಕೆ ನೀಡುವುದು, ಕರಪತ್ರಗಳ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕಾದ ಅಧಿಕಾರಿಯ ಕರ್ತವ್ಯ
ಲೋಪದಿಂದ ವನ್ಯಜಿವಿ ಮೃತಪಟ್ಟಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ಅಗಬೇಕೆಂದು ಒತ್ತಾಯಿಸಿದರು.
ತಾಲೂಕು ರೈತ ಸಂದ ಅಧ್ಯಕ್ಷ ತಿಮ್ಲಾಪುರ ದೇವರಾಜು ಮಾತನಾಡಿ, ಮೃತಪಟ್ಟ ಚಿರತೆಯ ಮರಣೋತ್ತರ ಪರೀೆ ಬಗ್ಗೆಯೂ ಅನುಮಾನಗಳಿವೆ. ಚಿರತೆ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವರು ಮಾ.4ರಂದೇ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ. ರಜೆ ಮೇಲೆ ತೆರಳುವ ಮೂಲಕ ತನಿಖೆಗೆ ಸಹಕರಿಸಬೇಕಿದ್ದ ಎಸಿಎಫ್ ಭರತ್ ಮತ್ತು ಆರ್ಎಫ್ಓ ಮಧು ಕರ್ತವ್ಯದಲ್ಲಿ ಮುಂದುವರೆದಿರುವುದು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಮೃತ ಚಿರತೆಯ ವಯಸ್ಸಿನ ಬಗ್ಗೆ ಅಧಿಕಾರಿ ದೃಡೀಕರಿಸುತ್ತಿಲ್ಲ ಎಂದು ಆರೋಪಿಸಿದರು.
ಉಜ್ಜಜ್ಜಿ ರಾಜಣ್ಣ ಮಾತನಾಡಿ, ಇಲ್ಲಿನ ಅರಣ್ಯಾಧಿಕಾರಿಗಳು ಸಾರ್ವಜನಿಕರಿಗೆ ಉತ್ತರಿಸಬೇಕಾದರೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ವನ್ಯಜಿವಿ ಇತಿಹಾಸದಲ್ಲೇ ಪ್ರಥಮ ಬಾರಿ ಬೋನಿಗೆ ಬಿದ್ದ ಚಿರತೆಯೊಂದು ಮೃತಪಡಲು ಅರಣ್ಯ ಇಲಾಖೆಯ ಬೇಜವಾಬ್ದಾರಿ ಕಾರಣ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಬಿ.ಕೆ.ಸಪ್ತಶ್ರೀ, ಇಲಾಖಾ ವಿಚಾರಣೆ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿ ಕಚೇರಿಯಲ್ಲಿರುವಂತಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಅರಣ್ಯ ಇಲಾಖೆಯವರು ಎಸ್ಒಪಿ ಅನುಸರಿಸುತ್ತಿಲ್ಲ. ಚಿರತೆ ಹಾವಳಿ ಬಗ್ಗೆ ಹೇಳಲು ಹೋದವರನ್ನೇ ಬೋನು ಸಾಗಿಸಲು ಟ್ರ್ಯಾಕ್ಟರ್ ತನ್ನಿ, ಡೀಸೆಲ್ ಹಾಕಿಸಿ ಎನ್ನುತ್ತಾರೆ. ಬೋನು ಇಟ್ಟ ನಂತರ ನಿಯಮಾನುಸರ ಸ್ಥಳ ಪರೀೆ ಮಾಡಿದ್ದರೆ ವನ್ಯಜಿವಿಯ ಪ್ರಾಣ ಉಳಿಯುತ್ತಿತ್ತು. ಚಿರತೆ ಸಾವಿಗೆ ಅರಣ್ಯ ಇಲಾಖೆ ನೇರ ಹೊಣೆ.
| ಎಂ.ನಾಗೇಶ್ ಮುಖಂಡ ಬಿಳಿಗೆರೆ