ಚಿರತೆ ದಾಳಿಯಿಂದ ಕರುವಿಗೆ ಗಾಯ

Oplus_0
Oplus_0
Published on

ಯಳಂದೂರು : ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ಚಿರತೆಯು ಹಸುವಿನ ಕರುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶದ ಸಮೀಪದಲ್ಲಿರುವ ಗಂಗವಾಡಿ ಗ್ರಾಮದ ವಾಸು ಅವರ ಮನೆಯ ಬದಿಯಲ್ಲಿರುವ ಕೊಟ್ಟಿಗೆಗೆ ಚಿರತೆಯು ನುಗ್ಗಿದೆ. ಹಸುವಿನ ಕರುವಿನ ಮೇಲೆ ದಾಳಿ ಮಾಡಿದೆ. ಕರು ಚೀರಾಟ ಕೇಳಿ ಮನೆಯವರು ಹೊರಬಂದಾಗ ಚಿರತೆ ಓಡಿ ಹೋಗಿದೆ. ದಾಳಿಯಿಂದ ಕರುವಿಗೆ ಗಾಯವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಚಿರತೆಯನ್ನು ಸೆರೆಗೆ ಬೋನು ಅಳವಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net