ಚಿರತೆ ದಾಳಿಗೆ ಹಸು, ಮೇಕೆ ಬಲಿ

15 HANUR 1
Published on

ಹನೂರು : ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗನೂರು ಸಮೀಪದಲ್ಲಿ ಬುಧವಾರ ಚಿರತೆ ದಾಳಿಗೆ ಹಸು ಹಾಗೂ ಮೇಕೆ ಬಲಿಯಾಗಿದೆ.

ಮೇಗನೂರು ಗ್ರಾಮದ ಮಾದೇವ ಅವರ ಜಮೀನಿನ ಸಮೀಪದಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆ ಇಟ್ಟ ಚಿರತೆ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದೆ. ಹಾಗೆಯೇ ಗೆರಟ್ಟಿ ಗ್ರಾಮದ ಮಾದೇಶ್ ಅವರ ಮೇಕೆಯನ್ನು ಸಹ ಬಲಿ ಪಡೆದಿದೆ. ಇದರಿಂದ ಈ ಭಾಗದ ಜನರು ಭಯಭೀತರಾಗಿದ್ದಾರೆ.

ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಅವರು ಚಿರತೆ ಹಾವಳಿಯನ್ನು ತಡೆಗಟ್ಟುವಂತೆ ಹಾಗೂ ದಾಳಿಯಿಂದ ಬಲಿಯಾದ ಹಸು ಹಾಗೂ ಮೇಕೆಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿ ಕೊಡುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net