ಚಿರತೆ ದಾಳಿಗೆ ಹಸು ಬಲಿ

Published on

ನಗೋಡು: ಸಮೀಪದ ಕೆ.ಜಿ.ಹಬ್ಬನಕುಪ್ಪೆ ಗ್ರಾಮದಲ್ಲಿ ತೋಟದಲ್ಲಿ ಮೇಯಲು ಕಟ್ಟಿದ್ದ ಹಸುವಿನ ಮೇಲೆ ಬುಧವಾರ ಸಂಜೆ ಚಿರತೆ ದಾಳಿ ನಡೆಸಿ ಕೊಂದುಹಾಕಿದೆ.


ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕೆ.ಜಿ.ಹಬ್ಬನಕುಪ್ಪೆ ಗ್ರಾಮದ ಜಿ.ಡಿ.ಮೋಹನ್ ಅವರು ತಮ್ಮ ತೋಟದಲ್ಲಿ ಹಸುವನ್ನು ಕಟ್ಟಿದ್ದರು. ಸಂಜೆ ಜಮೀನಿಗೆ ತೆರಳಿದಾಗ ಮೋಹನ್ ಅವರನ್ನು ಕಂಡ ಚಿರತೆ ಗಾಬರಿಗೊಂಡು ತೋಟದ ಮೂಲಕ ಅರಣ್ಯದೊಳಗೆ ಓಡಿಹೋಗಿದೆ.


ಸ್ಥಳಕ್ಕೆ ಗುರುವಾರ ಕಚುವಿನಹಳ್ಳಿ ಶ್ರೇಣಿಯ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಒಂದು ವಾರದಲ್ಲಿ ಗ್ರಾಮದ 4 ಮೇಕೆ, ಎರಡು ಕರು, ಒಂದು ಇಲಾತಿ ಜಾತಿಯ ಹಸುವನ್ನು ಬಲಿ ಪಡೆದಿರುವ ಚಿರತೆಯನ್ನು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ಕಾಡು ಪ್ರಾಣಿಗಳಿಂದ ಬೆಳೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡು ಕಷ್ಟಪಡುತ್ತಿರುವ ರೈತರ ನೆರವಿಗೆ ಧಾವಿಸಬೇಕೆಂದು ನೇರಳಕುಪ್ಪೆ ಗ್ರಾಪಂ ಅಧ್ಯಕ್ಷ ಉದಯ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net