ಚಿರತೆ ದಾಳಿಗೆ ಮೇಕೆ ಬಲಿ

25-pnp 3
Published on

ಪಾಂಡವಪುರ: ತಾಲೂಕಿನ ಬೇಬಿ ಗ್ರಾಮದಲ್ಲಿ ಚಿರತೆ ದಾಳಿಗೆ ಮೇಕೆ ಬಲಿಯಾಗಿದೆ.ಗ್ರಾಮದ ನಿಂಗೇಗೌಡ ಎಂಬುವರು ಮಂಗಳವಾರ ಬೆಳಗ್ಗೆ ಮೇಕೆಗಳನ್ನು ಮೇಯಿಸಲು ತೆರಳುತ್ತಿದ್ದಾಗ ಚಿರತೆ ಏಕಾಏಕಿ ಮೇಕೆಗಳ ಮೇಲೆ ದಾಳಿ ನಡೆಸಿ ಒಂದು ಮೇಕೆಯನ್ನು ಕೊಂದು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಮೇಕೆ ಕಳೆದುಕೊಂಡ ರೈತರನಿಗೆ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಸೆರೆಗೆ ಬೋನು ಇರಿಸಿದ್ದಾರೆ. ವಲಯ ಉಪ ಅರಣ್ಯಾಧಿಕಾರಿ ಶಿವಸಿದ್ದು, ಲವಕುಮಾರ್, ಭರತ್, ಕರೀಗೌಡ, ಬೇಬಿ ಗ್ರಾಮದ ಗಿರೀಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net