ಚಿರತೆ ದಾಳಿಗೆ ನಾಲ್ಕು ಮೇಕೆ ಬಲಿ

Published on

ಗುಂಡ್ಲುಪೇಟೆ: ತಾಲೂಕಿನ ಸೋಮನಪುರ ಗ್ರಾಮದ ಮನೆಯೊಂದರ ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ಮೇಕೆಗಳನ್ನು ಚಿರತೆ ಕೊಂದು ಹಾಕಿದೆ.
ಗ್ರಾಮದ ನಿವಾಸಿ ಮಂಟನಾಯಕ ಅವರ ಕೊಟ್ಟಿಗೆಗೆ ಬುಧವಾರ ನಸುಕಿನಲ್ಲಿ ನುಗ್ಗಿದ ಚಿರತೆ ನಾಲ್ಕು ಮೇಕೆಗಳ ಮೇಲೆ ದಾಳಿ ನಡೆಸಿ ಸಾಯಿಸಿದೆ. ಮೇಕೆಗಳ ಚೀರಾಟದಿಂದ ಎಚ್ಚೆತ್ತ ಮನೆಯವರು ಹೊರಬರುತ್ತಿದ್ದಂತೆ ಚಿರತೆ ಪರಾರಿಯಾಗಿದೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಹಜರು ನಡೆಸಿದರು. ಜಾನುವಾರು ನಷ್ಟಕ್ಕೆ ಪರಿಹಾರ ಕೊಡಿಸುವ ಭರವಸೆ ನೀಡಿದರು. ಚಿರತೆ ಗ್ರಾಮದೊಳಗೆ ನುಗ್ಗಿ ಮೇಕೆಗಳನ್ನು ಕೊಂದಿರುವುದರಿಂದ ಗ್ರಾಮಸ್ಥರಿಗೆ ಭಯ ಉಯುಂಟಾಗಿದೆ. ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net