ಚಿರತೆ ದಾಳಿಗೆ ನಾಯಿ ಬಲಿ

15-KGL-4,,
Published on

ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಗ್ರಾಮದ ಬಳಿಯಿರುವ ತೋಟದ ಮನೆಯ ಮುಂಭಾಗ ಕಾವಲಿಗೆ ಕಟ್ಟಿದ್ದ ನಾಯಿಯನ್ನು ಚಿರತೆ ಕೊಂದು ತಿಂದಿದ್ದು, ಸುತ್ತಮುತ್ತಲ ಜನರಿಗೆ ಆತಂಕ ಮೂಡಿಸಿದೆ.

ಗ್ರಾಮದ ಕೆ.ಪುಟ್ಟಮಾದ(ಬ್ಯಾಂಕ್ ಪುಟ್ಟಣ್ಣ)ಅವರ ತೋಟದ ಮನೆಯ ಮುಂಭಾಗ ಬೀದಿಯನ್ನು ಬುಧವಾರ ರಾತ್ರಿ ಕಟ್ಟಿ ಹಾಕಲಾಗಿತ್ತು. ಪುಟ್ಟ ಮಾದ ಹಾಗೂ ಕುಟುಂಬದ ಸದಸ್ಯರು ಕತ್ತಲಾಗುತ್ತಿದಂತೆ ಕಾವಲಿಗೆ ನಾಯಿ ಬಿಟ್ಟು ಮನೆಗೆ ತೆರಳಿದಿದ್ದರು. ಗುರುವಾರ ಬೆಳಗ್ಗೆ ತೋಟಕ್ಕೆ ಪುಟ್ಟಮಾದ ಅವರ ಪುತ್ರ ವೆಂಕಟೇಶ್‌ಮೂರ್ತಿ ಅವರು ಬಂದಾಗ ಚಿರತೆ ದಾಳಿಯಿಂದ ನಾಯಿ ಸತ್ತು ಬಿದ್ದಿತ್ತು. ನಾಯಿ ಬೇಟೆಯಾಡಿದ ಚಿರತೆ ದೇಹದ ಅರೆಬರೆ ತಿಂದು ತೆರಳಿದೆ. ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕೆಂಪನಪಾಳ್ಯ ಗ್ರಾಮಸ್ಥರು ಕೂಡಲೇ ಚಿರತೆ ಸೆರೆಗೆ ಬೋನು ಇಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net