ಚಿರತೆ ದಾಳಿಗೆ ಕುರಿ ಬಲಿ

Published on

ಚಾಮರಾಜನಗರ: ತಾಲೂಕಿನ ಹೊನ್ನಹಳ್ಳಿ ಹುಂಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಕುರಿ ಬಲಿಯಾಗಿದೆ. ಗ್ರಾಮದ ನಂಜಪ್ಪ ಸಾಕಿದ್ದ ಕುರಿ ಬುಧವಾರ ಚಿರತೆ ದಾಳಿಯಿಂದ ಮೃತಪಟ್ಟಿದೆ. ಮನೆಯ ಹೊರಗೆ ರಾತ್ರಿ ಕುರಿಯನ್ನು ಕಟ್ಟಿ ಹಾಕಲಾಗಿತ್ತು. ಇಲ್ಲಿಗೆ ಬಂದ ಚಿರತೆ ಕುರಿಯ ಮೇಲೆ ದಾಳಿ ಮಾಡಿ ಸಾಯಿಸಿದೆ. ಗುರುವಾರ ಬೆಳಗ್ಗೆ ಕೊಟ್ಟಿಗೆ ನೋಡಿದ ನಂಜಪ್ಪಗೆ ಕುರಿ ಸತ್ತು ಬಿದ್ದಿರುವುದು ಗೊತ್ತಾಗಿದೆ. ಕೊಟ್ಟಿಗೆ ಮತ್ತು ಮನೆ ಆವರಣದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಸಿಕ್ಕಿವೆ. ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net