ಚಿರತೆ ದಾಳಿಗೆ ಕರುಬಲಿ

15BTP01
Published on

ಬೆಟ್ಟದಪುರ: ಸಮೀಪದ ಕಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನೆಕಟ್ಟೆ ಹಡ್ಲು ಗ್ರಾಮದಲ್ಲಿ ಚಿರತೆ ದಾಳಿಗೆ ಕರು ಬಲಿಯಾಗಿದೆ.

ಗ್ರಾಮದ ತಿಮ್ಮೇಗೌಡ ಎಂಬುವರು ಶನಿವಾರ ರಾತ್ರಿ ಮನೆಯ ಆವರಣದಲ್ಲಿ ಕರುವನ್ನು ಕಟ್ಟಿ ಹಾಕಿದ್ದರು. ಮಧ್ಯರಾತ್ರಿ ಚಿರತೆ ದಾಳಿ ಮಾಡಿ ತಿಂದು ಹಾಕಿದೆ. ಗ್ರಾಮಸ್ಥರು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net