ಹುಳಿಯಾರು: ಹುಳಿಯಾರು ಸಮೀಪದ ಕಂಪನಹಳ್ಳಿ ತೋಟದ ಮನೆಯ ಬಳಿ ಬುಧವಾರ ಮುಂಜಾನೆ ಚಿರತೆ ದಾಳಿಗೆ 3 ಕರು ಬಲಿಯಾಗಿವೆ. ಕರುಗಳು ಕರಡಿಸಾಬರಪಾಳ್ಯದ ಬುಡೇನ್ ಸಾಬ್ ಅವರಿಗೆ ಸೇರಿದ್ದು, ತಮ್ಮ ಜಮೀನಿನ ಬಳಿ ಮೇಯಲು ಕಟ್ಟಿದ್ದಾಗ ದಾಳಿ ಮಾಡಿದ ಚಿರತೆ, 3 ಕರುಗಳನ್ನೂ ಬಲಿಪಡೆದಿದೆ. 1 ಕರುವನ್ನು ಅರ್ಧ ತಿಂದಿದ್ದು, ಉಳಿದ 2 ಕರುಗಳ ರಕ್ತ ಹೀರಿ ಹೋಗಿದೆ. ದಾರಿಹೋಕರಿಂದ ವಿಷಯ ತಿಳಿದ ಬುಡೇನ್ ಸಾಬ್ ಸ್ಥಳಕ್ಕೋಗುವಷ್ಟರಲ್ಲಿ 3 ಕರುಗಳೂ ಮೃತಪಟ್ಟಿವೆ.