

ಗುಂಡ್ಲುಪೇಟೆ: ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಜಮೀನಿನಲ್ಲಿ ಮೇಯುತ್ತಿದ್ದ ಎರಡು ಕುರಿಗಳನ್ನು ಚಿರತೆ ದಾಳಿ ಕೊಂದುಹಾಕಿದೆ.
ತಾಲೂಕಿನ ಹೊರೆಯಾಲ ಗ್ರಾಮದ ಬಸಮ್ಮ ಎಂಬುವರಿಗೆ ಸೇರಿದ ಯಡುವನಹಳ್ಳಿ ಬಳಿ ಇರುವ ಜಮೀನಿನಲ್ಲಿ ಸೋಮವಾರ ಅವರ ಮಗ ಮರಿಸ್ವಾಮಿ ಕುರಿಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಚಿರತೆ ದಾಳಿ ಮಾಡಿ ಎರಡು ಕುರಿಗಳನ್ನು ಕೊಂದುಹಾಕಿದೆ. ಅಕ್ಕಪಕ್ಕದಲ್ಲಿದ್ದ ದನಗಾಹಿಗಳು ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಚಿರತೆ ಪರಾರಿಯಾಗಿದೆ. ವಿಷಯ ತಿಳಿದ ಓಂಕಾರ್ ವಲಯ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ಕೊಡುವ ಬಗ್ಗೆ ಭರವಸೆ ನೀಡಿದರು.