ಚಿರತೆ ದಾಳಿ ; ಹಸು ಬಲಿ

ಚಿರತೆ ದಾಳಿ ; ಹಸು ಬಲಿ
Published on

ಅರಕಲಗೂಡು: ಚಿರತೆಯೊಂದು ಕರುವಿನ ಮೇಲೆ ದಾಳಿ ನಡೆಸಿ ಹೊತ್ತೋಯ್ದಿರುವ ಘಟನೆ ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಸೋಮನಹಳ್ಳಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.


ಗ್ರಾಮದ ನಿವಾಸಿ ಅಬ್ದುಲ್ ನಭಿ ಎಂಬುವರು ಮನೆ ಹಿಂದಿನ ಶೆಡ್ ನಲ್ಲಿ ಹಸು, ಕರುಗಳನ್ನು ಕಟ್ಟಿದ್ದರು. ಗುರುವಾರ ಬೆಳಗ್ಗೆ 6.30ರ ವೇಳೆ ಚಿರತೆ ಶೆಡ್ ಗೆ ನುಗ್ಗಿ 2 ವ?ರ್ದ ಕರುವನ್ನು ಹೊತ್ತೋಯ್ದು ತಿಂದು ಪರಾರಿಯಾಗಿದೆ. ಇದಕ್ಕೂ ಮೊದಲು 2 ನಾಯಿಗಳನ್ನು ಹೊತ್ತೋಯ್ದಿದೆ ಎಂದು ಅಬ್ದುಲ್ ನಭಿ ತಿಳಿಸಿದರು.


ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ತರಲ್ಲಿ ಆತಂಕ ಎದುರಾಗಿದ್ದು, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿಯಲು ಬೋನು ಇರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.


ತಾಲೂಕಿನದ್ಯಂತ ದಿನದಿಂದ ದಿನಕ್ಕೆ ಚಿರತೆ ಹಾವಳಿ ಹೆಚ್ಚಾಗುತ್ತಿದ್ದು ಜನರು ಆತಂಕದ ಬದುಕು ನಡೆಸುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net