ಚಿರತೆ ಚರ್ಮ ಸಾಗಿಸುತ್ತಿದ್ದವನ ಬಂಧನ

16bkl1
Published on

ಭಟ್ಕಳ: ಅಕ್ರಮವಾಗಿ ಚಿರತೆ ಚರ್ಮ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಾಲೂಕಿನ ಕಟಗಾರಕೊಪ್ಪದ ಕಬ್ರೆ ಬಸ್ ನಿಲ್ದಾಣದ ಬಳಿ ಸೋಮವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಕಟಗಾರಕೊಪ್ಪದ ಅತ್ತಿಬಾರ ನಿವಾಸಿ ಭೈರಾ ರಾಮ ಗೊಂಡ ಬಂಧಿತ ಆರೋಪಿ. ಅಂದಾಜು 15 ಲಕ್ಷ ರೂ. ಮೌಲ್ಯದ ಚಿರತೆ ಚರ್ಮವನ್ನು ಸಾಗಿಸುವ ಕುರಿತು ಜಿಲ್ಲೆಯ ಕ್ರೈಂ ಬ್ರಾಂಚ್ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ ಅವರಿಗೆ ಮಾಹಿತಿ ಲಭಿಸಿದೆ. ಕೂಡಲೆ ಸಿಬ್ಬಂದಿಯೊಂದಿಗೆ ಭಟ್ಕಳಕ್ಕೆ ತೆರಳಿ ಎಸಿಎಫ್ ಸುದರ್ಶನ ಜಿ.ಕೆ ಮಾರ್ಗದರ್ಶನ ಆರೋಪಿಯನ್ನು ಬಂಧಿಸಿದ್ದಾರೆ. ಚಿರತೆ ಚರ್ಮ ಮತ್ತು ಬೈಕ್ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸುದರ್ಶನ ನಾಯ್ಕ, ನಾಗರಾಜ ನಾಯ್ಕ, ಉಮೇಶ ನಾಯ್ಕ, ಮಂಜುನಾಥ ಹೆಗಡೆ, ಪ್ರಮೋದ ಬಿ., ಮಧುಕರ ವಿ. ನಾಯ್ಕ, ಕಾಡಪ್ಪ ಗೊಲಬಾವಿ, ಸಣ್ಣಯ್ಯ ಗೊಂಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net