ಚಿಮ್ಮನಚೋಡ ಶಾಲೆಯ ಎಸ್ಡಿಎಂಸಿಗೆ ಪತ್ನಿ ಅಧ್ಯಕ್ಷೆ, ಪತಿ ಉಪಾಧ್ಯಕ್ಷ

IMG-20230914-WA0013
Published on

ಚಿಂಚೋಳಿ: ತಾಲೂಕಿನ ಚಿಮ್ಮನಚೋಡ ಗ್ರಾಮದ ಸರಕಾರಿ ಪ್ರೌಢಶಾಲೆಯ 2023-24 ನೇ ಸಾಲಿನ ಶಾಲಾ ಸುಧಾರಣಾ ಸಮಿತಿ ಚುನಾವಣಾ ಜರುಗಿತು.

ನೂತನವಾಗಿ ಭಾರತಿ ಗಂಡ ಭೀಮಣ್ಣ ಗಣಾಪೂರ ಅಧ್ಯಕ್ಷರಾಗಿ ಆಯ್ಕೆಯಾದರೆ, ಪತಿ ಭೀಮಣ್ಣ ತಂದೆ ನಾಗಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಲಾಟರಿ ಮೂಲಕ ಆಯ್ಕೆಯಾಗಿ ಅಚ್ಚರಿ ಮೂಡಿಸಿದರು.

ಗ್ರಾ.ಪಂ ಅಧ್ಯಕ್ಷ ಮಲ್ಲಿಕಾರ್ಜುನ ರೆಡ್ಡಿ ನರನಾಳ, ಕಾರ್ಯದರ್ಶಿ ಜಗನ್ನಾಥ ರೆಡ್ಡಿ ಚಟನಳ್ಳಿ, ಮುಖ್ಯಗುರು ಶಂಕರ ನಾಯಕ, ಖುರಷೀದಮಿಯ್ಯ, ಪ್ರಮುಖರಾದ ರಾಘವೇಂದ್ರ ರೆಡ್ಡಿ, ಅಬ್ದುಲ್ ಖಾದರ್, ಕಿಶನ, ನರಸಪ್ಪ ಗಣಾಪೂರ, ವಿಶ್ವನಾಥ ರೆಡ್ಡಿ, ಪ್ರಕಾಶ್, ಜಗನ್ನಾಥ ಹೊಸಮನಿ, ಬಾಬುಮಿಯ್ಯ, ಮಹ್ಮದ ಖುರೇಷಿ, ಸಂತೋಷ ಗೌನಳ್ಳಿ, ರೇವಣಸಿದ್ದ ನಾಟಿಕಾರ, ಗೋಪಾಲ ಬಾಜೆಪಲ್ಲಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net