ಚಿನ್ನಾರಿ ಮುತ್ತನ ಹಾಡಿಗೆ ವಿದ್ಯಾರ್ಥಿನಿಯರ ಸಿಳ್ಳೆ

Published on

ಮೈಸೂರು: ಮಹಾರಾಣಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ‘ಚಿನ್ನಾರಿ ಮುತ್ತ’ ವಿಜಯರಾಘವೇಂದ್ರ ಹಾಡಿಗೆ ವಿದ್ಯಾರ್ಥಿನಿಯರು ಕೇಕೆ, ಸಿಳ್ಳೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು.
ಮಾತು ಮುಗಿಸುತ್ತಿದ್ದಂತೆಯೇ ಹಾಡು, ಡಾನ್ಸ್ ಮಾಡುವಂತೆ ವಿದ್ಯಾರ್ಥಿನಿಯರು ಕೂಗು ಹಾಕಿದರು. ವಿದ್ಯಾರ್ಥಿನಿಯರ ಡಿಮಾಂಡ್‌ಗೆ, ಜಾಜಿ ಮಲ್ಲಿಗೆ ನೋಡೆ, ಸೂಜುಗದ ಹೂವೆ ನೋಡೆ, ಎನ್ನ ಮ್ಯಾಲ ಮುನಿವಾರೇ.. ಎಂಬ ತಮ್ಮದೇ ಅಭಿನಯದ ಸೇವಂತಿ ಸೇವಂತಿ ಚಿತ್ರದ ಹಾಡನ್ನು ಹೇಳುವ ಮೂಲಕ ರಂಜಿಸಿದರು.
ವೇದಿಕೆಯಿಂದ ಕೆಳಗೆ ಇಳಿಯುತ್ತಿದ್ದಂತೆಯೇ ವಿಜಯರಾಘವೇಂದ್ರ ಅವರೊಂದಿಗೆ ಸೆಲ್ಫಿ ಕ್ಲಿಕಿಸಿಕೊಳ್ಳಲು ವಿದ್ಯಾರ್ಥಿನಿಯರು ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net