ಚಿನ್ನಾಭರಣ ದೋಚಿದ್ದ ಇಬ್ಬರ ಬಂಧನ

KDR robbrey
ಚಿನ್ನಾಭರಣ ದೋಚಿದ್ದವರಿಂದ ವಶಪಡಿಸಿಕೊಂಡ ಆಭರಣ, ಬೈಕ್‌ನ್ನು ಕಡೂರು ಪೊಲೀಸರು ಪ್ರದರ್ಶಿಸಿದರು. ಸಿಪಿಐ ರಫೀಕ್, ಪವನ್‌ಕುಮಾರ್, ಅಜರುದ್ದೀನ್, ಎಂ.ಎಸ್.ಧನಂಜಯ್, ಲೀಲಾವತಿ ಇತರರಿದ್ದರು.
Published on

ಕಡೂರು: ತಾಲೂಕಿನ ಸರಸ್ವತಿಪುರ ಗೇಟ್ ಬಳಿ ಮಹಿಳೆಯ ಕೊಲೆಗೆ ಯತ್ನಿಸಿ ಚಿನ್ನಾಭರಣಗಳನ್ನು ದೋಚಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 85 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ಭದ್ರಾವತಿ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮದ ಶಹಬಾಜ್ ಮತ್ತು ಹನುಮಾನಾಯ್ಕ ಬಂಧಿತ ಆರೋಪಿಗಳು. ಅ.26ರಂದು ಮಹಿಳೆ ಆಭರಣ ದೋಚಿದ್ದರು. 29ರಂದು ಆರೋಪಿಗಳನ್ನು ಬಳ್ಳಾರಿಯಲ್ಲಿ ಬಂಧಿಸಿ ಕರೆತಂದರು. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಪಿಐ ರಫೀಕ್, ಪಿಎಸ್‌ಐಗಳಾದ ಸಿ.ಸಿ.ಪವನ್‌ಕುಮಾರ್, ಅಜರುದ್ದೀನ್, ಎಂ.ಎಸ್.ಧನಂಜಯ್, ಲೀಲಾವತಿ, ಎಎಸ್‌ಐ ವೇದಮೂರ್ತಿ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net